ಬುಧವಾರ, ಅಕ್ಟೋಬರ್ 16, 2013
ಶನಿವಾರ, ಆಗಸ್ಟ್ 24, 2013
ಅರೆಯೂರು ಚಿ.ಸುರೇಶ್ ರವರ ಪರಿಚಯ
ಸಂಪಾದಕರಾದ ಅರೆಯೂರು ಚಿ.ಸುರೇಶ್ ರವರು ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಅರೆಯೂರು ಗ್ರಾಮದ ಶ್ರೀಮತಿ ಜಯಮ್ಮ, ಶ್ರೀ. ಚಿಕ್ಕಮಾದಯ್ಯನವರ ದ್ವಿತೀಯ ಪುತ್ರನಾಗಿ 1983 ರ ಆಗಸ್ಟ್ 30 ನೇ ತಾರೀಖು ಜನಿಸಿದರು ಇವರ ಮೊದಲ ಹೆಸರು ಲೋಕೇಶ್ ನಂತರ ಮನೆಯವರು ಪ್ರೀತಿಯಿಂದ ಸೂರಿ ಎಂದು ಕರೆದು, ಶಾಲೆಯಲ್ಲಿ ಎ.ಸಿ ಸುರೇಶ್ ಎಂದು ಹೇಳಿದರು, ಅರೆಯೂರು ಚಿಕ್ಕಮಾದಯ್ಯ ಸುರೇಶ್ ಅಲಿಯಾಸ್ರೆಯೂರು ಚಿ.ಸುರೇಶ್ ರವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅರೆಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರೆಯೂರು ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರಶಾಲೆಯಲ್ಲಿ ಪರೀಕ್ಷೆಶಿಕ್ಷಣವನ್ನು ಮುಗಿಸಿ ಹಾಲನೂರು ಗ್ರಾಮದ ಶ್ರೀ ಸಿದ್ಧಗಂಗಾ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಶಾಲೆಯಲ್ಲಿ ಬಿ.ಎ. ಪದವಿ ಮುಗಿಸಿ, ವಿದ್ಯೋದಯ ಕಾನೂನು ಕಾಲೇಜಿಗೆ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿ, ತಮ್ಮ ಓದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ತುಮಕೂರಿನ ಅಮರ ಸಂದೇಶ ಸಂಜೆ ಪತ್ರಿಕೆ, ತುಮಕೂರು ವಾರ್ತೆ, ನಗೆಮುಗುಳು, ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ, ಕಥೆ, ಕವಿತೆ, ಹಾಸ್ಯ ಲೇಖನ, ವ್ಯಂಗ್ಯಚಿತ್ರ, ಚುಟುಕು ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡಿರುವ ಅರೆಯೂರು ಚಿ.ಸುರೇಶ್ ರವರು, ಅರೆಯೂರು ಚಿ.ಸುರೇಶ್, ಅರೆಯೂರು ಸುರೇಶ್, ಕಾವ್ಯ ಮಧುಗಿರಿ, ಮಾಣಿಕ್ಯ ಮಡಿಕೇರಿ, ಅರೆಯೂರು ಶ್ರೀ ವೈದ್ಯಸುತ, ಅಚಿಸು, ನಾದಪ್ರಿಯ, ಭಾರತಿಪ್ರಿಯ, ಅರೆಯೂರು ಕಾವ್ಯಸುತ, ಎಂಬ ಹಲವಾರು ಕಾವ್ಯನಾಮದಿಂದ ಹಲವಾರು ಲೇಖನಗಳನ್ನು, ಕಥೆ ಕವನಗಳನ್ನು ರಚಿಸಿದ್ದಾರೆ
ಅರೆಯೂರು ಚಿ.ಸುರೇಶ್ ರವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಪ್ರಮುಖವಾದವುಗಳೆಂದರೆ ಪ್ರಜಾವಾಣಿ, ಸುಧಾ ಮಯೂರ, ತುಷಾರ, ಉದಯವಾಣಿ, ಉದಯಕಾಲ,,ಮಲ್ಲಿಗೆ ಮಾಸಪತ್ರಿಕೆ, ನವರಾಗಸಂಗಮ, ಸಖಿ, ನಿಮ್ಮೆಲ್ಲರ ಮಾನಸ, ಮಾಣಿಕ್ಯ, ಓ ಮನಸೇ, ಹಾಯ್ ಬೆಂಗಳೂರು, ಸಂಜೆವಾಣಿ, ಗೃಹಶೋಭ, ಯುಗಪುರುಷ, ನಗೆಮುಗುಳು, ಪ್ರಜಾಪ್ರಗತಿ, ಪ್ರಜಾಮನ, ತುಮಕೂರು ಮಿತ್ರ, ಗೋವ ರಾಜ್ಯದಿಂದ ಪ್ರಕಟವಾಗುತಿದ್ದ ಗೋವ ದರ್ಪಣ, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಅಂತರ್ಜಾಲ ಪತ್ರಿಕೆಗಳಾದ ಪಂಜು, ಅವಧಿ, ಸಂಪದ, ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಆನ್ ಲೈನ್ ನ್ಯೂಸ್, ಕನ್ನಡ ನ್ಯೂಸ್ ನೌ ಸೇರಿದಂತೆ ಹಲವು ತಾಣಗಳಲ್ಲಿ ಲೇಖನ, ಕಥೆ ಕವಿತೆ ಪ್ರಕಟಗೊಂಡಿವೆ
ಅರೆಯೂರು ಚಿ.ಸುರೇಶ್ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆಗಳು ಅರೆಯೂರು ಪತ್ರಿಕೆ, ಅರೆಯೂರು ನ್ಯೂಸ್, ಬಡವರ ಕೂಗು, ಸುದ್ದಿ ಸಮಾಚಾರ, ಕನ್ನಡ ಇ ನ್ಯೂಸ್, ತುಳು ನ್ಯೂಸ್ ಪ್ರಮುಖವಾದವುಗಳು
ವಾಲ್ಮೀಕಿ ಮಿತ್ರ ಪತ್ರಿಕೆಯಲ್ಲಿ ಕಾರ್ಯಕಾರಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಗುಬ್ಬಿ ತಾಲ್ಲೂಕು ವರದಿಗಾರರಾಗಿ, ಪ್ರಜಾಮನ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ತುಮಕೂರು ವಾರ್ತೆ, ಅಮರ ಸಂದೇಶ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ
ಅರೆಯೂರು ಚಿ.ಸುರೇಶ್ ರವರಿಗೆ ಕಾವ್ಯಶ್ರೀ, ಹೆಮ್ಮೆಯ ಕನ್ನಡಿಗ, ಕನ್ನಡ ಮಾಣಿಕ್ಯ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ
ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದ ಅರೆಯೂರು ಚಿ.ಸುರೇಶ್ ರವರು ದೂರದ ಕರಾವಳಿ ಭಾಗದ ತುಳು ಭಾಷೆಯ ತುಳು ನ್ಯೂಸ್ ಆನ್‌ಲೈನ್ ಪತ್ರಿಕೆ ಮಾಡಿ ತುಳು ನಾಡಿನ ತುಳು ಭಾಷಿಕರಿಗೆ ತುಳು ಭಾಷೆಯಲ್ಲಿ ಸುದ್ದಿ ನೀಡುತ್ತಿರುವ ಕಾರ್ಯ ಶ್ಲಾಘನೀಯ
ಅರೆಯೂರು ಚಿ.ಸುರೇಶ್ ರವರ ಪ್ರಕಟಿತ ಕೃತಿಗಳು
ಶಿರ್ಷಿಕೆ | ಪ್ರಕಾರ | ಪ್ರಕಟಿತ ವರ್ಷ
ಕಾವ್ಯಮಂಜರಿ (ಕವನ ಸಂಕಲನ) 2012
ಮಾಣಿಕ್ಯ (ಕಥಾಸಂಕಲನ) 2014
ಅನಾಮಿಕ (ಕಾದಂಬರಿ) 2016
ಕನಸು (ಕವನ ಸಂಕಲನ) 2014
ಪ್ರೇಮಾಯಣ (ಕಥಾಸಂಕಲನ) 2017
ಮಂಥನ (ಲೇಖನ ಸಂಗ್ರಹ) 2017
ಆರೋಗ್ಯವಾಗಿರೋಣ... (ಲೇಖನ ಸಂಗ್ರಹ) 2019
ಶ್ರೀ ವೈದ್ಯನಾಥೇಶ್ವರ ಸ್ವಾಮಿ ಚರಿತ್ರೆ (ಲೇಖನ ಸಂಗ್ರಹ) 2013
ನಮ್ಮೂರ ಇತಿಹಾಸ (ಲೇಖನ ಸಂಗ್ರಹ) 2013
(ಎಲ್ಲಾ ಕೃತಿಗಳ ಪ್ರಕಾಶಕರು: ಶಮಿತಾ ಪಬ್ಲಿಕೇಶನ್, ಪಡುಬಿದ್ರಿ, ಉಡುಪಿ)
![]() |
ಶುಕ್ರವಾರ, ಜುಲೈ 12, 2013
ಭಾನುವಾರ, ಜೂನ್ 30, 2013
- ಹಿಟ್ಲರ್‌ಗಾಗಿ ಸತ್ತು ಬದುಕಿದ್ದ ಮಾರ್ಗೋಟ್!
- ಹಿಟ್ಲರ್‌ಗಾಗಿ ಪ್ರತಿದಿನವೂ ಸತ್ತು ಬದುಕಿದ್ದ ಮಾರ್ಗೋಟ್..!
ಜರ್ಮನಿಯನ್ನು ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭಾರೀ ಪುಕ್ಕಲ. ಯಾರಾದರೂ ತನಗೆ ಆಹಾರದಲ್ಲಿ ವಿಷ ಸೇರಿಸಿ ಸಾಯಿಸಬಹುದೆಂಬುದು ಭೀತಿ ಆತನನ್ನು ಸದಾ ಕಾಡುತ್ತಿತ್ತು. ಹೀಗಾಗಿ ತನಗೆ ಸಿದ್ಧಪಡಿಸಿದ್ದ ಆಹಾರ ಪರೀಕ್ಷಿಸಲೆಂದೇ 15 ಮಹಿಳೆಯರ ನೇಮಿಸಿಕೊಂಡಿದ್ದ. ಅವರೆಲ್ಲಾ ಆಹಾರ ತಿಂದ ಮೇಲೂ ಬದುಕಿದ್ದಾರೆ ಎಂಬುದನ್ನು ಖಚಿತಡಿಸಿಕೊಂಡ ಬಳಿಕವಷ್ಟೇ ಆತ ತಾನು ಆಹಾರ ತಿನ್ನುತ್ತಿದ್ದ. ಹೀಗೆ ಆಕಸ್ಮಿಕವಾಗಿ ಆತನ ಕೈಗೆ ಸಿಕ್ಕು, ಆಹಾರ ಪರೀಕ್ಷೆಯ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದು ಮಾರ್ಗೋಟ್ ವೋಕ್ ಎಂಬ ಮಹಿಳೆ.
ಹಿಟ್ಲರ್ ಸಸ್ಯಾಹಾರಿ..!
ಎರಡನೇ ಮಹಾಯುದ್ಧದ ವೇಳೆ ಪತಿ ಜರ್ಮನ್ ಸೇನೆಯಲ್ಲಿ ಸೇವೆಗೆ ತೆರಳಿದ ವೇಳೆ, ಈಕೆ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಿಟ್ಲರ್‌ನ ಕೈಗೆ ಸಿಕ್ಕಿಬಿದ್ದಿದ್ದಳು. ಆತ ಮಾರ್ಗೋಟ್‌ಳನ್ನು ಆಹಾರ ಪರೀಕ್ಷೆ ಕೆಲಸಕ್ಕೆ ಸೇರಿಸಿಕೊಂಡಿದ್ದ. ಶುದ್ಧ ಸಸ್ಯಾಹಾರಿಯಾಗಿದ್ದ ಹಿಟ್ಲರ್‌ನ ಆಹಾರವನ್ನು ತಿನ್ನುವುದೇ ಮಾಗೋìಟ್ ಸೇರಿದಂತೆ 15 ಮಹಿಳೆಯರ ಏಕೈಕ ಕೆಲಸವಾಗಿತ್ತು. ಪ್ರತಿ ಬಾರಿ ಆಹಾರ ಬಾಯಿಗಿಟ್ಟಾಗಲೂ ಎಲ್ಲರೂ ಜೀವಭಯಕ್ಕೆ ಒಳಗಾಗಿರುತ್ತಿದ್ದರು. ರುಚಿಯಾದ ಆಹಾರ ಬಾಯಲ್ಲಿದ್ದರೂ, ಅದರಲ್ಲಿ ವಿಷ ಇರಬಹುದೇನೂ ಎಂಬ ಆತಂಕ ಅವರನ್ನೆಲ್ಲಾ ಕಾಡುತ್ತಿತ್ತು.
ಇಷ್ಟೆಲ್ಲಾ ಭದ್ರತೆ ಇದ್ದರೂ, 1944ರಲ್ಲಿ ಹಿಟ್ಲರ್‌ನ ಆಪ್ತ ಬಳಗದಲ್ಲಿದ್ದ ವ್ಯಕ್ತಿಯೋರ್ವನೇ ಬಾಂಬ್ ದಾಳಿ ನಡೆಸಿ ಹಿಟ್ಲರ್ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಹಿಟ್ಲರ್ ಬದುಕುಳಿದ. ಈ ಸ್ಫೋಟದ ಘಟನೆಯ ಸಮಯದಲ್ಲೇ ಆಪ್ತರ ಸಲಹೆ ಮೇರೆಗೆ ಮಾರ್ಗೋಟ್ ಹಿಟ್ಲರ್‌ನ ಆವಾಸಸ್ಥಾನದಿಂದ ಪರಾರಿಯಾಗಿ ಬರ್ಲಿನ್ ಸೇರಿಕೊಂಡಿದ್ದಳು. ಆದರೆ ಉಳಿದ 14 ಜನ ಸೇವಕಿಯರು ಹಿಟ್ಲರ್ ಬಳಿಯೇ ಉಳಿದುಕೊಂಡಿದ್ದರು.
ಮುಂದೆ ಕೆಲವೇ ದಿನಗಳಲ್ಲಿ ಸೋವಿಯತ್ ಒಕ್ಕೂಟದ ಪಡೆಗಳು ಜರ್ಮನ್ ಮೇಲೆ ದಾಳಿ ನಡೆಸಿ ದೇಶವನ್ನು ಕೈವಶ ಮಾಡಿಕೊಂಡವು. ಸೋವಿಯತ್ ಪಡೆಗಳು ಹಿಟ್ಲರ್‌ನ ಎಲ್ಲಾ 14 ಆಹಾರ ಪರೀಕ್ಷಕಿಯರನ್ನು ಗುಂಡಿಟ್ಟು ಹತ್ಯೆ ಮಾಡಿದವು. ಇತ್ತ ಹಿಟ್ಲರ್‌ನಿಂದ ಪಾರಾಗಿದ್ದ ಮಾರ್ಗೋಟ್ ರಷ್ಯಾ ಸೈನಿಕರ ಕೈಯಲ್ಲಿ ಸತತ 14 ದಿನ ಅತ್ಯಾಚಾರಕ್ಕೆ ತುತ್ತಾದಳು.
ಮುಂದೆ ಯುದ್ಧ ಮುಗಿದ ಮೇಲೆ ಆಕೆ ಹೊಸ ಜೀವನ ಕಂಡುಕೊಂಡಿದ್ದಳು. ಆದರೆ ತಾನು ಹಿಟ್ಲರ್‌ನ ಆಹಾರ ಪರೀಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ವಿಷಯವನ್ನೂ ಮಾರ್ಗೋಟ್ ಯಾರಿಗೂ ತಿಳಿಸಿರಲಿಲ್ಲ. ತಿಳಿಸಿದರೆ ಯಾರಾದರೂ ಹತ್ಯೆ ಮಾಡುವ ಭಯ ಆಕೆಯನ್ನು ಕಾಡುತ್ತಿತ್ತು. ಇದೀಗ ಜೀವನದ ಕಡೆಯ ಕ್ಷಣಗಳನ್ನು ಎಣಿಸುತ್ತಿರುವ ಮಾರ್ಗೋಟ್, ತನ್ನ ಅನುಭವಗಳನ್ನೆಲ್ಲಾ ಬಯಲು ಮಾಡಿದ್ದಾಳೆ. ಅದರಲ್ಲಿ ಆಕೆ ತನ್ನ ಈ ಕಥೆ ಹೇಳಿಕೊಂಡಿದ್ದಾಳೆ.
ಸೋಮವಾರ, ಮೇ 13, 2013
ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ.....
ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ದಿನಗಳಲ್ಲಿ ಪಕ್ಷಿಗಳೆಡೆಗಿನ ಪ್ರೀತಿ- ವಾತ್ಸಲ್ಯವನ್ನು ಕಾಪಾಡಡಲು ಪ್ರಯತ್ನಿಸುತ್ತಿರುವ ಇಂತಹ ಕೆಲವು ಪರಿಸರ ಪ್ರೇಮಿಗಳ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಲಿ. ಪರಿಸರ ಸಮತೋಲನ ಕಾಪಾಡಲು ಪ್ರಯತ್ನಿಸಿ, ಕಳೆದುಕೊಳ್ಳುತ್ತಿರುವ ಬಾಂಧವ್ಯ, ಪರಿಸರದ ಕೊಂಡಿಯನ್ನು ಮತ್ತೆ ಕೂಡಿಸಲು ಪ್ರಯತ್ನಿಸೋಣ. ಪಕ್ಷಿಗಳು ಮತ್ತೆ ನಮ್ಮ ನಮ್ಮ ಮನೆಯಂಗಳದಲಿ ಚಿಲಿಪಿಲಿಗುಟ್ಟಲಿ. ಅವುಗಳ ಅಳಿವು-ಉಳಿವಿನೊಂದಿಗೆ ನಮ್ಮ ಬದುಕೂ ಅಂಟಿದೆ- ಭಾವನಾತ್ಮಕ ನಂಟಿದೆ. ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು? ಎಂದು ಮತ್ತೆ ಹಾಡೋಣ. ನಮ್ಮ ಆತ್ಮೀಯ ಜನ-ಪ್ರಿಯ ಗುಬ್ಬಕ್ಕನನ್ನು ಮತ್ತೆ ನಮ್ಮ ಮನ-ಮನೆಯಂಗಳಕ್ಕೆ ತರಲು ಪ್ರಯತ್ನಿಸೋಣ.
ಶನಿವಾರ, ಏಪ್ರಿಲ್ 27, 2013
“ಅವಳ ಬಾಳ ಪುಟಗಳಿಂದ”
ಗುರುವಾರ, ಡಿಸೆಂಬರ್ 1, 2011
ಬುಧವಾರ, ನವೆಂಬರ್ 30, 2011
ಗುರುವಾರ, ನವೆಂಬರ್ 3, 2011
ಯಾಕೆ ಕಾಡುತಿದೆ ಸುಮ್ಮನೆ ನನ್ನನು ಈ …ಹಾಡು?
-ಅರೆಯೂರು ಚಿ.ಸುರೇಶ್
ಬುಧವಾರ, ಜುಲೈ 6, 2011
ಪ್ರೀತಿಯ ಹುಡುಗಿ
ಪ್ರೀತಿಯ ಹುಡುಗಿ, ನೀನು ನಾನಗಲು ಸಾಧ್ಯವಿಲ್ಲ, ನಾನು ನೀನಾಗಲು ಸಾಧ್ಯವಿಲ್ಲ. ನೀನು ನಾನಾಗಿ ನಾನು ನೀನಾದರೂ ನನ್ನಲ್ಲಿರುವ ನೀನು ನಿನ್ನಲ್ಲಿರುವ ನಾನು ಬೇರೆ ಬೇರೆಯೇ. ನೀನು ನಿನಗಾಗಿ ನಾನಾಗುವುದು, ನಾನು ನನಗಾಗಿ ನೀನಾಗುವುದು, ನಾನು ನಿನ್ನಲ್ಲಿಯ ನನ್ನನ್ನು, ನೀನು ನನ್ನಲ್ಲಿಯ ನಿನ್ನನ್ನು ನೋಡಿಕೊಳ್ಳುವ ಆಸೆಯಿಂದ ಮಾತ್ರ. ನೀನು ನನಗಾಗಿ ನಾನಾಗುವ ಬದಲು, ನಾನು ನಿನಗಾಗಿ ನೀನಾಗುವ ಬದಲು, ನಾನು ನಾನಾಗಿಯೇ ಇದ್ದು ನೀನು ನೀನಾಗಿಯೇ ಇದ್ದು, ನನ್ನಲ್ಲಿರುವ ನಿನ್ನನ್ನ ನನ್ನೊಳಗೆ ಕಂಡು ನಿನ್ನಲ್ಲಿರುವ ನನ್ನನ್ನು ನಿನ್ನೊಳಗೆ ಕಂಡುಕೊಳ್ಳುವುದೇ ಬದುಕು ಅರಿತು ಕೊಳ್ಳುವುದೆಂದರೆ ಅದೇ ತಾನೆ? ಪ್ರೀತಿಯ ಹುಡುಗಿ,
ನೀನು
ನಾನಗಲು ಸಾಧ್ಯವಿಲ್ಲ, ನಾನು ನೀನಾಗಲು ಸಾಧ್ಯವಿಲ್ಲ. ನೀನು ನಾನಾಗಿ ನಾನು ನೀನಾದರೂ ನನ್ನಲ್ಲಿರುವ ನೀನು ನಿನ್ನಲ್ಲಿರುವ ನಾನು ಬೇರೆ ಬೇರೆಯೇ.ನೀನು ನಿನಗಾಗಿ ನಾನಾಗುವುದು, ನಾನು ನನಗಾಗಿ ನೀನಾಗುವುದು, ನಾನು ನಿನ್ನಲ್ಲಿಯ ನನ್ನನ್ನು, ನೀನು ನನ್ನಲ್ಲಿಯ ನಿನ್ನನ್ನು ನೋಡಿಕೊಳ್ಳುವ ಆಸೆಯಿಂದ ಮಾತ್ರ. ನೀನು ನನಗಾಗಿ ನಾನಾಗುವ ಬದಲು, ನಾನು ನಿನಗಾಗಿ ನೀನಾಗುವ ಬದಲು, ನಾನು ನಾನಾಗಿಯೇ ಇದ್ದು ನೀನು ನೀನಾಗಿಯೇ ಇದ್ದು, ನನ್ನಲ್ಲಿರುವ ನಿನ್ನನ್ನ ನನ್ನೊಳಗೆ ಕಂಡು ನಿನ್ನಲ್ಲಿರುವ ನನ್ನನ್ನು ನಿನ್ನೊಳಗೆ ಕಂಡುಕೊಳ್ಳುವುದೇ ಬದುಕುಅರಿತು ಕೊಳ್ಳುವುದೆಂದರೆ ಅದೇ ತಾನೆ?
ಭಾನುವಾರ, ಮಾರ್ಚ್ 27, 2011
ನಮ್ಮ ಮನೆಯ ಬಂಗಾರ
ಭಾನುವಾರ, ಮಾರ್ಚ್ 20, 2011
"ಬೆಳಕಿಗೊಂದು ಹಣತೆ" ಕವನ ಸಂಕಲನ ಬಿಡುಗಡೆ
ಗುರುವಾರ, ಜನವರಿ 13, 2011
ಗುರುವಾರ, ಡಿಸೆಂಬರ್ 9, 2010
ಅಮರ ಪ್ರೇಮದ ಕಥೆ.
ಕಥೆ. `ಪ್ರೀತಿ' ಎಂಬ ಎರಡಕ್ಷರಕ್ಕೆ ಇರುವ ತಾಕತ್ತು ಎಂಥದೆಂಬುದಕ್ಕೆ ಸಾಕ್ಷಿಯಾಗುವಂಥ
ಕಥೆ.
ನಮ್ಮ ಕಥಾನಾಯಕಿ, ಒಂದಿಡೀ ತಲೆಮಾರಿಗೇ ಆದರ್ಶವಾಗುವಂಥವಳು. ಅವಳ ಹೆಸರು ರೀನೀ ಕ್ಲೈನ್. ಥೇಟ್ ಅಪ್ಸರೆಯಂತಿರುವ ಆಕೆ, ತನ್ನ ಬಹುಕಾಲದ ಗೆಳೆಯ ಟೈ ಜೀಗೆಲ್‌ನನ್ನು
ಮದುವೆಯಾಗಿದ್ದಾಳೆ. ಅರೆ, ಪ್ರಿಯತಮನನ್ನು ಮದುವೆಯಾದರೆ, ಅದರಲ್ಲಿ ವಿಶೇಷವೇನು ಬಂತು
ಎಂದಿರಾ? ಕೇಳಿ, ವಿಶೇಷ ಇರುವುದೇ ಅಲ್ಲಿ. ಏನೆಂದರೆ, ಟೈ ಜೀಗೆಲ್‌ಗೆ ಒಂದು
ಕಣ್ಣಿಲ್ಲ. ಒಂದು ಕೈ ಇಲ್ಲ. ಎರಡೂ ಕಿವಿಗಳಿಲ್ಲ. ಮೂಗು, ಇರಬೇಕಾದ ಸ್ಥಿತಿಯಲ್ಲಿಲ್ಲ.
ಹಲ್ಲುಗಳಿಗೆ ಒಂದು ಆಕಾರವಿಲ್ಲ. ತಲೆಯಲ್ಲಿ ಕೂದಲೂ ಇಲ್ಲ. ಹತ್ತು ವರ್ಷಗಳ ನಂತರ
ಜೇಗೆಲ್ ಬದುಕಿರುತ್ತಾನಾ ಎಂಬ ವಿಷಯವಾಗಿ ಯಾವ ಡಾಕ್ಟರೂ ಗ್ಯಾರಂಟಿ ಕೊಡುತ್ತಿಲ್ಲ.
ಇದೆಲ್ಲ ಗೊತ್ತಿದ್ದರೂ, ನಂಗೇ ಅವನೇ ಬೇಕು ಎಂದು ರೀನೀ ಕ್ಲೈನ್ ಪಟ್ಟು
ಹಿಡಿದಿದ್ದಾಳೆ. ಅವನನ್ನು ದಕ್ಕಿಸಿಕೊಂಡಿದ್ದಾಳೆ ಮತ್ತು ನೂರಾರು ಜನರ ಸಮ್ಮುಖದಲ್ಲಿ
ಅವನನ್ನು ಮದುವೆಯಾಗಿದ್ದಾಳೆ.
ನಿಜ ಹೇಳಬೇಕೆಂದರೆ, ಒಂದು ಕಾಲದಲ್ಲಿ ರೀನೀ ಕ್ಲೈನ್‌ಗಿಂತ ನಾಲ್ಕು ಪಟ್ಟು
ಚೆಂದಕ್ಕಿದ್ದವನು ಟೈ ಜೀಗೆಲ್. ಅವನ ಕಟ್ಟುಮಸ್ತಾಗಿದ್ದ `ಬಾಡಿ' ನೋಡಿಯೇ ನಾನು ಮೊದಲ
ನೋಟದಲ್ಲೇ ಕ್ಲೀನ್‌ಬೋಲ್ಡ್ ಆಗಿಬಿಟ್ಟೆ ಎಂದವಳು ರೀನಿ. ಹಾಗೆ, ಸುರಸುಂದರಾಂಗನಂತಿದ್ದ
ಟೈ ಜೀಗೆಲ್, ಕೈ ಇಲ್ಲದ, ಕಿವಿಯಿಲ್ಲದ, ಕೆನ್ನೆಯ ನೈಸ್‌ನೈಸ್ ಎಂಬಂಥ ಭಾಗವೂ ಇಲ್ಲದ,
ಮೂಗೇ ಇಲ್ಲದ ಕುರೂಪಿಯಾದದ್ದು ಏಕೆ ಮತ್ತು ಹೇಗೆ? ಇಂಥ ಕುರೂಪಿಯನ್ನೂ ಮದುವೆಯಾಗಲು
ರೀನೀ ಕ್ಲೈನ್‌ಗಿದ್ದ ಕಾರಣವಾದರೂ ಏನು? ಇಂಥ ಕುತೂಹಲದ ಪ್ರಶ್ನೆಗೆ ಉತ್ತರವಾಗಿ
ಬಿಚ್ಚಿ ಕೊಳ್ಳುವುದೇ ಜೀಗೆಲ್-ರೀನೀಯ ಅಮರ ಪ್ರೇಮದ ಕಥೆ.
***
ಅಮೆರಿಕದ ನೌಕಾಪಡೆಯಲ್ಲಿ ಸಾರ್ಜೆಂಟ್ ಆಗಿದ್ದವನು ಟೈ ಜೀಗೆಲ್. ಹೇಳಿ ಕೇಳಿ ಮಿಲಿಟರಿ
ಅಸಾಮಿಯಲ್ಲವೆ? ಹುಡುಗ ಕಟ್ಟುಮಸ್ತಾಗಿದ್ದ. 21ನೇ ವಯಸ್ಸಿಗೇ ಸಾರ್ಜೆಂಟ್
ಪದವಿಗೇರಿದ್ದರೂ ಅಹಮಿಕೆಯಿಂದ ದೂರವೇ ಉಳಿದಿದ್ದ. ಟೂ ಸಿಂಪಲ್ ಎಂಬಂತೆ
ಬದುಕುತ್ತಿದ್ದ. ಈ ಸರಳತೆಯೇ ರೇನೀ ಕ್ಲೈನ್‌ಳನ್ನು ಅವನ ಹತ್ತಿರ ತಂದಿತು. ಅವಳಾದರೂ
ದೂರದವಳಲ್ಲ. ಅವನದೇ ಸ್ಕೂಲಿನಲ್ಲಿ ಓದಿದವಳು. ಅವನಿಗಿಂತ ಮೂರು ವರ್ಷ ಚಿಕ್ಕವಳು.
ಒಂದು ಸಂತೋಷವೆಂದರೆ, ಈ ಜೋಡಿಯ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿಲ್ಲ.
ಅಂತಸ್ತುಗಳ ಅಂತರ ಅಡ್ಡಬರಲಿಲ್ಲ. ಖಳನಾಯಕರ ಕಾಟವೂ ಇರಲಿಲ್ಲ.
ಈ ಕಾರಣದಿಂದಲೇ ನಾವುಂಟು, ಮೂರು ಲೋಕವುಂಟು ಎಂದು ಮೆರೆದಾಡಿದರು ಜೀಗೆಲ್-ರೀನೀ.
ಹೀಗಿದ್ದಾಗಲೇ ರೀನೀಯ ತಂದೆ ಅಪಘಾತವೊಂದರಲ್ಲಿ ಸತ್ತುಹೋದ. ಆ ನಂತರದಲ್ಲಿ ಗೆಳತಿಯ
ಬಗ್ಗೆ ಜೀಗೆಲ್ ಅದೆಷ್ಟು ಕಾಳಜಿ ತಗೊಂಡನೆಂದರೆ -ಏಕಕಾಲಕ್ಕೆ ಅವಳಿಗೆ ಫ್ರೆಂಡ್,
ಲವರ್, ಫಿಲಾಸಫರ್, ಫಾದರ್, ಗೈಡ್.... ಹೀಗೆ ಎಲ್ಲವೂ ಆಗಿಬಿಟ್ಟ. ತಂದೆಯ ನೆನಪಲ್ಲಿ
ಅವಳು ಡಿಪ್ರೆಷನ್‌ಗೆ ಈಡಾಗಲಿಕ್ಕೆ, ಅಪ್ಪನನ್ನು ನೆನಪು ಮಾಡಿಕೊಂಡು ಕಂಬನಿ
ಸುರಿಸುವುದಕ್ಕೆ ಈತ ಅವಕಾಶವನ್ನೇ ಕೊಡಲಿಲ್ಲ. ಅಷ್ಟೊಂದು ಮುತುವರ್ಜಿಯಿಂದ ನೋಡಿಕೊಂಡ.
ಹೀಗಿದ್ದಾಗಲೇ ಅಮೆರಿಕಾ-ಇರಾಕ್ ಮಧ್ಯೆ ಯುದ್ಧ ಶುರುವಾಯಿತು. ಈತ ನಿಂತ ನಿಲುವಲ್ಲಿಯೆ
ಯುದ್ಧಕ್ಕೆ ಹೊರಟು ನಿಂತ. ಹೋಗೋನು ಹೋಗ್ತಾ ಇದೀಯ. ಅದಕ್ಕಿಂತ ಮುಂಚೆ ನನ್ನನ್ನು
ಮದುವೆಯಾಗಿಬಿಡು. ನಾಲ್ಕು ಜನ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿ. ಅವರೆಲ್ಲರ ಮುಂದೆ ಇವಳೇ
ನನ್ನ ಹೆಂಡ್ತಿ ಎಂದು ಹೇಳಿ ಹೋಗಿಬಿಡು ಎಂದು ರೀನೀ ದುಂಬಾಲು ಬಿದ್ದಳು. ಹೀಗೆಂದಾಗ
ಅವಳಿಗೆ 19 ವರ್ಷವಾಗಿತ್ತು. ಜೀಗೆಲ್‌ಗೆ 21.
ಆದರೆ, ರೀನಿಯ ಆಹ್ವಾನವನ್ನು ನಯವಾಗಿ ತಳ್ಳಿಹಾಕಿದ ಜೀಗೆಲ್ ಹೇಳಿದನಂತೆ; `ಅಂಥ ಅವಸರ
ಏನಿದೆ? ಯುದ್ಧ ಬೇಗ ಮುಗಿಯುತ್ತೆ, ರಜೆಗೆ ಬರ್‍ತೀನಲ್ಲ? ಆಗ ಮದುವೆಯಾಗೋಣ. ಸಾವಿರಾರು
ಮಂದಿಯ ಸಮ್ಮುಖದಲ್ಲಿ ದಂಪತಿಯರಾಗೋಣ. ಆಮೇಲೆ ನಮ್ಮಿಷ್ಟದ ತಾಣಕ್ಕೆ ಹನಿಮೂನ್‌ಗೆ
ಹೋಗೋಣ...' ಇಷ್ಟು ಹೇಳಿದವನೇ ಕಡಗದಂತಿದ್ದ ಒಂದು ದೊಡ್ಡ ರಿಂಗ್ ತಂದು ರೀನಿಯ
ಮೊಣಕಾಲಿಗೆ ಹಾಕಿ ಹೇಳಿದನಂತೆ: `ನಿಂಗೇ ಗೊತ್ತಲ್ಲ? ನಮ್ದು ಸ್ಪೆಷಲ್ ಲವ್, ಅದೇ
ಕಾರಣಕ್ಕೆ ನಿನ್ನ ಕಾಲಿಗೆ ರಿಂಗ್ ಹಾಕಿದೀನಿ. ಇವತ್ತು ನಮ್ಮ ಎಂಗೇಜ್‌ಮೆಂಟ್
ಆಗಿಹೋಯ್ತು ಅಂತ ತಿಳ್ಕೊ. ಮುಂದಿನ ವರ್ಷ ಮದುವೆಯಾಗೋಣ. ಈಗ ನಾನು ಹೋಗಿಬರ್‍ತೀನಿ.
ಒಂದು ಬೆಸ್ಟ್ ಆಫ್ ಲಕ್ ಹೇಳಿ ಕಳಿಸು...' ಇಷ್ಟು ಹೇಳಿ, ಜೀಗೆಲ್ ಯುದ್ಧಭೂಮಿಗೆ
ಹೊರಟೇಹೋದ. ಅವತ್ತು ಆಗಸ್ಟ್ 13, 2003. ಅದು, ರೀನೀಯ ಹುಟ್ಟುಹಬ್ಬದ ದಿನ.
ಆನಂತರದಲ್ಲಿ ಇರಾಕ್‌ನ ಯುದ್ಧಭೂಮಿಯಿಂದ ಅಮೆರಿಕದಲ್ಲಿದ್ದ ಅಮ್ಮನ ಮನೆಗೆ
ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಜೀಗೆಲ್. ಆಗೆಲ್ಲ ಈ ಬೆಡಗಿ ರೀನೀ ತಾನೂ ಅವನ
ಮನೆಗೆ ಹೋಗಿಬಿಡುತ್ತಿದ್ದಳು. ತಾನೂ ಒಂದಷ್ಟು ಮಾತಾಡುತ್ತಿದ್ದಳು. ಜೋಕು ಹೊಡೆದು
ಗೆಳೆಯನನ್ನು ನಗಿಸುತ್ತಿದ್ದಳು. ಏನೋ ಸುಳ್ಳು ಹೇಳಿ ಹೆದರಿಸುತ್ತಿದ್ದಳು. ಅಲ್ಲಿಂದ
ಯಾವಾಗ ಬರ್‍ತೀಯ? ನಂಗೆ ಏನು ತರ್‍ತೀಯ ಎಂದೆಲ್ಲ ವಿಚಾರಿಸಿಕೊಂಡು, ಭಾವಿ
ಅತ್ತೆಯೊಂದಿಗೆ ಒಂದಿಷ್ಟು ಹರಟಿ ಎದ್ದು ಬರುತ್ತಿದ್ದಳು. ಈ ವೇಳೆಗೆ, ಜೀಗೆಲ್
ಅಮೆರಿಕಕ್ಕೆ ಬರುವ ದಿನ ಯಾವುದೆಂದು ಅವಳಿಗೆ ತಿಳಿದುಹೋಗಿತ್ತು. ಆತ ತಾಯ್ನಾಡಿಗೆ ಬಂದ
ಹದಿನೈದನೇ ದಿನವೇ ಮದುವೆಯಾಗುವುದೆಂದು ಆಕೆ ನಿಶ್ಚಯಿಸಿದ್ದಳು. ಇದಕ್ಕಾಗಿ ಸಕಲ
ಸಿದ್ಧತೆಯಲ್ಲಿ ತೊಡಗಿದ್ದಳು. ಹೀಗಿದ್ದಾಗಲೇ,ಜೀಗೆಲ್‌ನ ಆಗಮನಕ್ಕೆ ಇನ್ನೂ ಎರಡು
ತಿಂಗಳು ಬಾಕಿಯಿದ್ದಾಗಲೇ, ಅದೊಂದು ಬೆಳಗ್ಗೆ ಜೀಗೆಲ್‌ನ ಮನೆಯಿಂದ ಫೋನ್ ಬಂತು:
`ತಕ್ಷಣವೇ ಮನೆಗೆ ಬಂದು ಹೋಗು' ಎಂಬುದು ಫೋನ್ ಕರೆಯ ಸಾರಾಂಶ.
ಓಹ್, ಯುದ್ಧ ಬೇಗ ಮುಗಿದಿರಬೇಕು. ಗೆದ್ದ ಖುಷಿ ದೊಡ್ಡದಿದೆ. ಹಾಗಾಗಿ ಜೀಗೆಲ್ ಬೇಗ
ಬಂದಿದಾನೆ ಅನ್ಸುತ್ತೆ. ನನಗೆ ಸರ್‌ಫ್ರೈಜ್ ಕೊಡಲಿಕ್ಕೆಂದೇ ಬೇರೆಯವರಿಂದ ಫೋನ್
ಮಾಡಿಸಿದ್ದಾನೆ ಕಳ್ಳ... ಎಂದುಕೊಂಡು ದೊಡ್ಡ ಸಂಭ್ರಮದಿಂದಲೇ ಭಾವೀ ಗಂಡನ ಮನೆಗೆ
ಹೋದಳು ರೀನಿ. ಅಲ್ಲಿ ಸ್ಮಶಾನ ಮೌನವಿತ್ತು. ಏನಾಯ್ತೆಂದು ಈಕೆ ಕೇಳುವುದರೊಳಗೇ,
ಇವಳನ್ನು ಕಂಡದ್ದೇ ಜೀಗೆಲ್‌ನ ಮನೆಮಂದಿ ಜೋರಾಗಿ ಅತ್ತರು. ಈ ಮಧ್ಯೆಯೇ ಒಬ್ಬರು
ಸುದ್ದಿ ಹೇಳಿದರು. ಇರಾಕ್‌ನ ಆತ್ಮಹತ್ಯಾ ದಳದ ಉಗ್ರರು ಜೀಗೆಲ್‌ನ ತಂಡದವರ ಮೇಲೆ
ಬಾಂಬ್ ಎಸೆದಿದ್ದಾರೆ. ಈ ದುರಂತದಲ್ಲಿ ಜೀಗೆಲ್‌ಗೆ ತುಂಬಾ ಪೆಟ್ಟು ಬಿದ್ದಿದೆಯಂತೆ.
ಬದುಕೋದು ಕಷ್ಟ ಎಂದು ಡಾಕ್ಟರೇ ಹೇಳಿದ್ದಾರಂತೆ. ಅವನೀಗ ಸ್ಯಾನ್ ಆಂಟೋನಿಯೋದ ಮಿಲಿಟರಿ
ಆಸ್ಪತ್ರೇಲಿ ಇದಾನಂತೆ... ಮುಂದಿನದೇನನ್ನೂ ಕೇಳಿಸಿಕೊಳ್ಳುವ ತಾಳ್ಮೆ ರೀನೀಗೆ
ಇರಲಿಲ್ಲ. ಕಣ್ಣೀರು ಹಾಕಲಿಕ್ಕೆ ಇದು ಸಮಯವಲ್ಲ ಎಂದು ನಿರ್ಧರಿಸಿದವಳೇ ಚಿಕ್ಕದೊಂದು
ಲಗೇಜು ಜತೆ ಮಾಡಿಕೊಂಡು ಸ್ಯಾನ್ ಆಂಟೋನಿಯಾದ ಮಿಲಿಟರಿ ಆಸ್ಪತ್ರೆಗೆ ಬಂದೇಬಿಟ್ಟಳು.
ಅವಳು ನೀಡಿದ ವಿವರ ಗಮನಿಸಿದ ವೈದ್ಯರು- `ಈ ಪೇಷಂಟ್ ಐಸಿಯುನಲ್ಲಿ ಇದ್ದಾನೆ' ಎಂದರು.
ಉಸಿರು ಬಿಗಿಹಿಡಿದು ವೈದ್ಯರೊಂದಿಗೆ ಹೆಜ್ಜೆಹಾಕಿದ ರೀನೀಗೆ ಎದುರಾದದ್ದು -ಮೈ ಪೂರಾ
ಬ್ಯಾಂಡೇಜು ಮೆತ್ತಿಕೊಂಡಿದ್ದ ಒಂದು ದೇಹ. ಅದನ್ನು ಕಂಡು ರೀನೀ ಬೆರಗಿನಿಂದ
ಹೇಳಿದಳಂತೆ; ಡಾಕ್ಟರ್, ನಾನು ಕೇಳಿದ್ದು ಸಾರ್ಜೆಂಟ್ ಟೈ ಜೀಗೆಲ್ ಅವರನ್ನು. ನೀವು
ಇದ್ಯಾರೋ ಬೇರೆ ಆಸಾಮಿಯನ್ನು ತೋರಿಸ್ತಾ ಇದೀರ. ಅವನು ಹೀಗಿರಲಿಲ್ಲ. ಟಾಲ್, ಸ್ವೀಟ್
ಅಂಡ್ ಹ್ಯಾಂಡ್‌ಸಮ್. ಹಾಗಿದ್ದ ನನ್ನ ಹುಡುಗ. ಅವನನ್ನು ತೋರಿಸಿ ಪ್ಲೀಸ್...'
ಡಾಕ್ಟರು ಮಾತಾಡದೆ ಸುಮ್ಮನೆ ನಿಂತರು.
ಅಷ್ಟೆ. ಪರಮ ವಿಕಾರವಾಗಿದ್ದ ಆ ದೇಹದ ಒಡೆಯನೇ ಜೀಗೆಲ್ ಎಂದು ರೀನೀಗೆ
ಅರ್ಥವಾಗಿಹೋಯಿತು. ಆತನಿಗೆ ಆಗಿರುವ ಗಾಯದ ಪೆಟ್ಟಿನ ತೀವ್ರತೆ ಎಂಥದೆಂದು ವೈದ್ಯರು
ನಿಧಾನವಾಗಿ ವಿವರಿಸಿದರು. ನಂತರ ನಿರ್ಧಾರದ ಧ್ವನಿಯಲ್ಲಿ ಹೇಳಿದರು. `ಬಾಂಬ್ ಸೋಟದ
ತೀವ್ರತೆಗೆ ಜೀಗೆಲ್‌ನ ಎಡಭುಜದ ನರ-ಮೂಳೆಗಳೆಲ್ಲ ನುಜ್ಜುಗುಜ್ಜಾಗಿವೆ. ಹೀಗಾಗಿ ಅವನ
ಎಡಗೈನ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಿದೀವಿ. ಬಲಗೈನಿಂದ ಮೂರು ಬೆರಳುಗಳೇ
ಹಾರಿಹೋಗಿವೆ. ತಲೆಯ ಎಡಭಾಗಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಎರಡೂ ಕಿವಿಗಳು ತುಂಡಾಗಿ
ಬಿದ್ದೇ ಹೋಗಿವೆ. ಒಂದು ಕಣ್ಣೂ ಹೋಗಿದೆ. ದವಡೆಯ ಹಲ್ಲುಗಳು ಉದುರಿವೆ. ಕೆನ್ನೆಯ
ಮಾಂಸಖಂಡಗಳೂ ನುಜ್ಜುಗುಜ್ಜಾಗಿವೆ. ಇಷ್ಟೆಲ್ಲ ಪೆಟ್ಟಾಗಿದ್ರೂ ಜೀಗೆಲ್ ಬದುಕಿದ್ದಾನೆ.
ಈಗ ಅವನಿಗೆ ಮಿದುಳಿನ ಆಪರೇಷನ್ ಮಾಡ್ತೇವೆ. ಒಂದರ್ಥದಲ್ಲಿ ಅವನಿಗೆ ಮುಖವೇ ಇಲ್ಲ ನಿಜ.
ಆದರೆ, ತೊಡೆಸಂದಿನ ಮಾಂಸವನ್ನು ಕತ್ತರಿಸಿ ಅವನ್ನು ತುಟಿಗಳ ಜಾಗಕ್ಕೆ ಸೇರಿಸಿ, ಒಂದು
ಶೇಪ್ ಕೊಡ್ತೇವೆ. ಅಷ್ಟು ಮಾತ್ರ ನಮ್ಮಿಂದ ಸಾಧ್ಯ. ನಮ್ಮ ಪ್ರಯತ್ನವನ್ನು ನಾವು
ಮಾಡ್ತೇವೆ. ಉಳಿದದ್ದು ಜೀಸಸ್‌ಗೆ ಬಿಟ್ಟದ್ದು...'
ಇಷ್ಟು ಹೇಳಿ ವೈದ್ಯರು ಚಿಕಿತ್ಸೆ ಆರಂಭಿಸಿದಾಗ, ಹೊಸದೊಂದು ಪ್ರಶ್ನೆ ರೀನೀಗೆ
ಎದುರಾಯಿತು. ಮಿದುಳು ಆಪರೇಷನ್ ಮಾಡಿದ ನಂತರ ಬೈಛಾನ್ಸ್ ಜೀಗೆಲ್‌ಗೆ ನೆನಪಿನ ಶಕ್ತಿಯೂ
ಕಳೆದುಹೋದರೆ ಗತಿ ಏನು? ಅಥವಾ ತನ್ನ ಈಗಿನ ಸ್ಥಿತಿ ಕಂಡು ಆತನಿಗೆ ಹುಚ್ಚು ಹಿಡಿದರೆ
ಮಾಡುವುದೇನು? ಆಸ್ಪತ್ರೆಯ ವಾರ್ಡ್‌ನಲ್ಲಿ ಕೂತು, ಹೀಗೆ ಯೋಚಿಸಿ ಯೋಚಿಸಿ ಹಣ್ಣಾದಳು
ರೀನೀ. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ. ಜೀಗೆಲ್ ಎಲ್ಲ ಚಿಕಿತ್ಸೆಗೆ ಸಕಾರಾತ್ಮಕವಾಗಿ
ಸ್ಪಂದಿಸಿದ. ಒಂದೂವರೆ ವರ್ಷದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಕೂಡ
ಆದ. ಆದರೆ, ಮನೆಗೆ ಹೊರಟವನಿಗೆ ಒಂದು ಕೈ ಇರಲಿಲ್ಲ. ಕಿವಿಗಳೂ ಇರಲಿಲ್ಲ. ಬಲಗೈನ ಮೂರು
ಬೆರಳಿರಲಿಲ್ಲ. ಒಂದು ಕಣ್ಣಿರಲಿಲ್ಲ. ತಲೆಯಲ್ಲಿ ಕೂದಲಿರಲಿಲ್ಲ. ನಿಲ್ಲಲು ತ್ರಾಣವೂ
ಇರಲಿಲ್ಲ. ಇಂಥ ಸಂದರ್ಭದಲ್ಲಿ ಅವನನ್ನು ಪುಟ್ಟ ಮಗುವಿನಂತೆ ನೋಡಿಕೊಂಡಳು ರೀನೀ.
ಆದರೂ, ತನ್ನ ಗಾಯದ ಕಲೆ ನೋಡಿಕೊಂಡಾಗ ಜೇಗೆಲ್ ಬಿಕ್ಕಳಿಸಿ ಅಳುತ್ತಿದ್ದ.
ಅಂತರ್ಮುಖಿಯಂತೆ ಕೂತುಬಿಡುತ್ತಿದ್ದ. ಅಂಥ ಸಂದರ್ಭದಲ್ಲೆಲ್ಲ ರೀನೀ ಅವನಿಗೆ
ಅಮ್ಮನಾಗುತ್ತಿದ್ದಳು. ತಂದೆಯಂತೆ ಸಮಾಧಾನ ಹೇಳುತ್ತಿದ್ದಳು. ದಿನದ ಹೆಚ್ಚು ಸಮಯವನ್ನು
ಮನೆಯೊಳಗೇ ಕಳೆದರೆ ಅವನಿಗೂ ಡಿಪ್ರೆಶನ್ ಕಾಡಬಹುದು ಅನ್ನಿಸಿದಾಗ ವಾಕಿಂಗ್
ಕರೆದೊಯ್ಯಲು ನಿರ್ಧರಿಸಿದಳು ರೀನೀ. ಆಗ ಜೀಗೆಲ್ ಹೊಸದೊಂದು ಬೇಡಿಕೆ ಇಟ್ಟ. `ನಾನು
ಸನ್‌ಗ್ಲಾಸ್ ಹಾಕ್ಕೊಂಡು ಹೊರಗೆ ಬರ್‍ತೇನೆ..'
`ನಿಜವಾದ ಸಂಕಟ ಎದುರಾದದ್ದೇ ಆಗ. ಏಕೆಂದರೆ ಸನ್‌ಗ್ಲಾಸ್ ಹಾಕಿಕೊಳ್ಳಲು ಅಗತ್ಯವಿದ್ದ
ಕಿವಿಗಳೇ ಜೀಗೆಲ್‌ಗೆ ಇರಲಿಲ್ಲ. ಹಾಗೆಂದು ಹೇಳಿದರೆ ಅವನಿಗೆ ನೋವಾಗುತ್ತದೆ ಎಂದು
ಕಾರಣಕ್ಕೆ, ಅವನಿಗೆ ಏನೂ ಹೇಳಲಿಲ್ಲ ರೀನೀ. ಬದಲಿಗೆ, ಅವನ ತಲೆಯ ಸುತ್ತ ಎಲಾಸ್ಟಿಕ್
ಹಾಕಿ ಸನ್‌ಗ್ಲಾಸ್ ತೊಡಿಸಿಯೇ ಬಿಟ್ಟಳು. ಮುಂದೆ ನಿಧಾನವಾಗಿ ತನ್ನ ಪರಿಸ್ಥಿತಿ
ಹೇಗಿದೆ ದೇಹದ ಯಾವ್ಯಾವ ಭಾಗ ಅಸ್ತಿತ್ವ ಕಳೆದುಕೊಂಡಿದೆ ಎಂದು ಜೀಗೆಲ್‌ಗೆ
ಅರ್ಥವಾಯಿತು. ಆತ ಅದೊಂದು ದಿನ ರೀನೀ ಹಾಗೂ ತನ್ನ ಬಂಧುಗಳನ್ನು ಜತೆಯಲ್ಲಿ
ಕೂರಿಸಿಕೊಂಡು ಹೇಳಿಬಿಟ್ಟ `ಮುಂದೆ, ನನ್ನ ಹಣೇಲಿ ಬರೆದಂತಾಗಲಿ. ನಾನು ಇರುವಷ್ಟು ದಿನ
ಒಂಟಿಯಾಗಿ ಬದುಕ್ತೇನೆ. ರೀನೀ ಬೇರೆ ಯಾರನ್ನಾದ್ರೂ ಮದುವೆಯಾಗಲಿ. ನಾವೇ ಮುಂದೆ ನಿಂತು
ಅವಳ ಮದುವೆ ಮಾಡೋಣ... ಅವಳ ಭವಿಷ್ಯ ಹಾಳಾಗೋದು ಬೇಡ. ನನ್ನಂಥ ಕುರೂಪಿ ಅವಳ
ಜತೆಯಾಗೋದು ಬೇಡ...'
ಜೀಗೆಲ್‌ನ ಮಾತಿಗೆ ಎಲ್ಲರೂ ಒಪ್ಪಿದರು. ಆದರೆ ರೀನೀ ಒಪ್ಪಲಿಲ್ಲ. ಆಕೆ ಜೀಗೆಲ್‌ನ
ಎದುರು ನಿಂತು ಹೀಗೆಂದಳು: `ಹುಚ್ಚಾ, ನಾನು ಪ್ರೀತಿಸಿದ್ದು ನಿನ್ನ ದೇಹವನ್ನಲ್ಲ ಕಣೋ.
ನಿನ್ನ ಮನಸ್ಸನ್ನು ಪ್ರೀತಿಸ್ದೆ ನಾನು. ಈಗ ಇದೀಯ ನೋಡು, ಅದಕ್ಕಿಂತಲೂ
ಕುರೂಪಿಯಾಗಿದ್ದೆ ಆಸ್ಪತ್ರೇಲಿ. ಆಗ ನಿನ್ನ ದೇಹ ಕೊಳೆತು ವಾಸನೆ ಹೊಡೀತಿತ್ತು.
ಅದನ್ನು ನಗುತ್ತಲೇ ಸಹಿಸಿಕೊಂಡೆ. ಅಂಥ ನನಗೆ ನಿನ್ನನ್ನು ಈಗ ನಿನ್ನನ್ನು
ಒಪ್ಪಿಕೊಳ್ಳೋಕೆ ಕಷ್ಟವಾಗ್ತಿಲ್ಲ. ಬದುಕು ಅನ್ನೋದಿದ್ರೆ ಅದು ನಿನ್ನ ಜತೆ ಮಾತ್ರ.
ಮೊದಲು ಪ್ರೀತಿಸ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಈಗ ನಿನ್ನನ್ನು
ಪ್ರೀತಿಸ್ತಿದೀನಿ ಕಣೋ...' ರೀನೀಯ ನಿಷ್ಕಪಟ ಮಾತು ಕೇಳಿ ಜೇಗೆಲ್ ಮಾತೇ ಹೊರಡದೆ
ನಿಂತುಬಿಟ್ಟ. ಅವನ ತಾಯಿ ಧಾವಿಸಿ ಬಂದು ರೀನಿಯನ್ನು ತಬ್ಬಿಕೊಂಡು ಅಳತೊಡಗಿದಳು.
ಜೀಗೆಲ್‌ನ ತಂದೆ ಈ ಹುಡುಗಿಗೆ ನಿಂತಲ್ಲೇ, ಕೈಮುಗಿದು ಕಣ್ಣೊರಸಿಕೊಂಡ.
***
ಮುಂದೆ 2005ರ ಅಕ್ಟೋಬರ್ 7ರಂದು ತುಂಬಾ ಅದ್ಧೂರಿಯಾಗಿ ಜೀಗೆಲ್- ರೀನೀಯ ಮದುವೆ
ನಡೆಯಿತು. ಶುದ್ಧ ಪ್ರೀತಿಗೆ ಎಂದಿಗೂ ಸಾವಿಲ್ಲ, ಮಧುರ ಪ್ರೀತಿ ಎಂದಿಗೂ ಸೋಲಲ್ಲ ಎಂಬ
ಮಾತಿಗೆ ಸಾಕ್ಷಿಯೂ ಆಯಿತು. ಅಂದಹಾಗೆ, ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ.
ಮುಖವಿಲ್ಲದವನನ್ನೂ ಮುದ್ದಿನ ಗಂಡ ಎಂದು ಒಪ್ಪಿಕೊಂಡ ರೀನೀಗೆ ಜೈ ಹೋ.
"ಜಾಹೀರಾತು ಪ್ರೇಮ" ಪತ್ರ !
ನೀನೇ ನನ್ನ TVS SCOOTY (first love) ಮತ್ತು ನನ್ನ AIWA (pure passion). ನಾನು ಯಾವತ್ತೂ BPL (believe in the best) ಮತ್ತು ನೀನೇನಿದ್ದರೂ SANSUI (better
than the best).
ನೀನು ನನಗೆ DOMINO'S PIZZA (delivering a million smiles**) ಇದ್ದ ಹಾಗೆ.
ಇದು ನನ್ನಲ್ಲಿ COLGATE ENERGY GEL (seriously fresh) ಭಾವನೆ
ಉಂಟುಮಾಡುತ್ತಿದೆ.
ನೀನು ನನ್ನ ಜೀವನ ಸಂಗಾತಿಯಾಗಬೇಕೆಂದು ನಾನು ಬಯಸುತ್ತೇನೆ, ಆದರೆ ನೀನು KAWASAKI
BAJAJ CALIBER (The unshakable ) ಆಗಿರುವ ನಿನ್ನಪ್ಪನ ಬಗ್ಗೆ ಚಿಂತಿತಳಾಗಿದ್ದೀ
ಅಂತ ನನಗೆ ಗೊತ್ತು. ನನ್ನಪ್ಪನೂ CEAT (born tough ). ಆದರೆ ಚಿಂತಿಸದಿರು, ನಾನು
ಕೂಡ FORD ICON (the josh machine) ಮತ್ತು ನನ್ನ ಮನೆಯ ಇತರ ಮಂದಿ KELVINATORS
(the coolest ones).
ಅವರೆಲ್ಲಾದರೂ ಬೇಡ ಅಂತ ಹೇಳಿದರೆ, ನಾವು ಓಡಿ ಹೋಗಿ ಮದುವೆಯಾಗೋಣ ಮತ್ತು PHILIPS
(let's make things better) ಮಾಡೋಣ. ಆಗವರು MIRINDA (zor ka jhatka dhire
se lage) ಅಂತ ಭಾವಿಸುತ್ತಾರೆ. ಆದರೆ ನಾನು ಯಾವತ್ತೂ COCA COLA (Jo chahe ho
jaye)ದಲ್ಲಿ ನಂಬಿಕೆ ಇಟ್ಟಿರುವವ.
ನಮ್ಮ ಮದುವೆಗೆ SAMSUNG DIGITALL (everyone's invited) ಮತ್ತು ಮದುವೆಯ ಬಳಿಕ
ನಾವಿಬ್ಬರೂ WHIRLPOOL (U and me — the world's best homemakers).
ಯಾವತ್ತಿಗೂ NOKIA (connecting people) ದಂತಿರುವ, ಎಲ್ಲರನ್ನೂ ಪ್ರೀತಿಸುವ ದೇವರ
ಮೇಲೆ ನಂಬಿಕೆ ಇಡು. ಈಗ ಪ್ರೀತಿಯ ಗೀತೆಯನ್ನು HYUNDAI (we are listening).,
ಪ್ರೀತಿ ಎನ್ನುವುದು DAIRY MILK (real taste of life ) ಅಂತ ನೀನು ಯಾವತ್ತೂ
ತಿಳಿದಿರಬೇಕು. ಅಲ್ವೇ?
ಆದ್ದರಿಂದ ಯಾವತ್ತೂ ನನ್ನನ್ನು ಮರೆಯಬೇಡ. Ok bye!
ನಾನೀ ಪತ್ರದಲ್ಲಿ ಬರೆದದ್ದು ಸ್ವಲ್ಪ ಮಾತ್ರ, ಆದ್ರೆ... PEPSI (Yeh dil mange more)!!!
LG (digitally yours)
xyz
ಅಪರಿಚಿತೆಗೊಂದು ಪ್ರೇಮ ಪತ್ರ
ಇನ್ನೇನು ಕರಿಯಲಿಕ್ಕೆ ಸಾಧ್ಯ,ನಾನು ನಿನ್ನ ಒಂದು ದಿನ ನೋಡಿದ್ದಸ್ಟೇ ,ಅದೂ
ಕ್ಷಣವಸ್ಟೇ.ನಿನಗೆ ಗೊತ್ತಿಲ್ಲ ಬಿಡು, ನಾನಿನ್ನ ನೊಡಿದ್ದು, ನಿನ್ನನ್ನು ನನ್ನಲ್ಲಿ
ತುಂಬಿಕೊಂಡಿದ್ದು.
ಎಂದೋ ಅಪರೂಪಕ್ಕೆ ಸ್ವಲ್ಪ ತಡವಾಗಿಯೇ ಜಾಗಿಂಗ್ ಹೋಗುತ್ತಿದ್ದ ನಾನು, ಅಂದು ಮುಂಜಾನೆಯೇ ಚುಮು ಚುಮು ಚಳಿಯಲ್ಲಿ ಸಣ್ಣದೊಂದು ಮಫ್ಲರ್ ಸುತ್ತಿ ಹೊರಟಿದ್ದೆ.ಈ ಬೆಳಗು
ಅನ್ನೋದು ತುಂಬಾ ಆಶ್ಚರ್ಯ ಮತ್ತು ಸುಂದರ , ಯಾಕೆ ದಿನ ಪೂರ್ತಿ ಹೀಗೇ ಇರಬಾರದು ಅಂಥ
ಯೊಚಿಸ್ತಾ ಓಡುತ್ತಿದ್ದೆ, ಇಬ್ಬನಿಯ ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಕೇಳುತ್ತಾ.
ಇಷ್ಟು ದಿನವೂ ಏನೂ ಕಾಣಿಸದಿದ್ದ ಆ ಮನೆ ಮುಂದೆ ಅವೋತ್ತು ಮೊದಲು ನೀ ಕಂಡಿದ್ದು,
ಮಲ್ಲಿಗೆಯ ಘಮ ಮೂಗಿಗೆ ಅಡರಿದಾಗ ಜೊತೆಗೆ ಕೋಗಿಲೆ ಕಂಠದಿಂದ ಬಂದ ಆ ಹಾಡು ಕೇಳಿದಾಗ...
ಮೂಡಲ ಮನೆಯ
ಮುತ್ತಿನ ನೀರಿನ
ಎರಕವ ಹೊಯ್ದ,ನುಣ್ಣನೇ ಎರಕವ ಹೊಯ್ದ
ಬಾಗಿಲು ತೆರೆದು
ಬೆಳಕು ಹರಿದು
ಜಗವೆಲ್ಲಾ ತೋಯ್ದ,ಹೊಯ್ತೋ ಜಗವೆಲ್ಲಾ ತೋಯ್ದು
ಸೂರ್ಯೋದಯಕ್ಕೆ ಅರಳಲು ಕಾದಿರುವ ಮಲ್ಲಿಗೆಯನ್ನು ಬಿಡಿಸುತ್ತಾ, ಹಾಡನ್ನು ಹೇಳುತ್ತಾ,
ಮಲ್ಲಿಗೆಯಂತೆಯೇ ಇರುವ ನಿನ್ನನ್ನು ಎವೆಯಿಕ್ಕದೇ ನೋಡಿದ್ದೆ ಮತ್ತು ನನ್ನೇ ನಾನು
ಮರೆತಿದ್ದೆ. ನೀನು ಮಾತ್ರ ನನ್ನನ್ನು ಕಿರುಗಣ್ಣಿನಲ್ಲಿಯೂ ನೋಡಲಿಲ್ಲ. ಹಾಡು
ಮುಗಿಯಿತೋ , ಮಲ್ಲಿಗೆ ಮುಗಿಯಿತೋ ನೀನು ಒಳಗೆ ಹೋಗಿದ್ದೆ, ನಿನ್ನ ಬಿಂಬವನ್ನು ನನ್ನ
ಕಣ್ಣಲ್ಲಿ ಬಿಟ್ಟು, ಹೃದಯಕ್ಕೆ ಲಗ್ಗೆಯಿಟ್ಟು, ನಾಳೆ ಮತ್ತೆ ಸಿಗುವೆಯೆಂಬ ನಿರೀಕ್ಷೆಯ
ಹುಟ್ಟಿಸಿ.
ಕೇಳು ಗೆಳತಿ..
ಅಂದಿನಿಂದ ಇಂದಿನವರೆಗೆ ನಾನು ಒಂದು ದಿನವೂ ಜಾಗಿಂಗ್ ತಪ್ಪಿಸಲಿಲ್ಲ. ಆ ಮನೆಯ ಮುಂದೆ
ಹತ್ತು ನಿಮಿಷ ಕಾಯದೇ ಹೋಗುವುದಿಲ್ಲ. ಆದರೆ ಪ್ರತಿದಿನವೂ ನಿರಾಸೆ, ಕಾಣುವುದು
ಕಂಪೋಂಡ್ ಮತ್ತು ಹೂವೇ ಇಲ್ಲದ ಮಲ್ಲಿಗೆ ಬಳ್ಳಿ ಮಾತ್ರ.
ಆದರೆ ನನ್ನ ಹೃದಯ ಹೇಳುತಿದೆ ನೀನು ಸಿಕ್ಕೇ ಸಿಗುತ್ತೀಯ ಎಂದು. ನಮ್ಮ ಮನೆಯ ಎಲ್ಲಾ
ಪಾಟಿನಲ್ಲಿ ಈಗ ಮಲ್ಲಿಗೆ ಬಳ್ಳಿ ಮಾತ್ರ, ದಿನಾ ಅದಕ್ಕೆ ನೀರು ಗೊಬ್ಬರ ಹಾಕಲು
ಮರೆಯುವುದಿಲ್ಲ. ಹೂವು ಬಿಡುವ ಸಮಯ ಸನ್ನಿಹಿತವಾಗಿದೆ ಗೆಳತಿ, ನಿರಾಸೆ ಮಾಡದೇ
ಬರುತ್ತೀಯಲ್ಲಾ?
ನಿನಗೆ ಬೇಕಾದಷ್ಟು ಹೂವು ಕೊಯ್ದುಕೋ, ಎಲ್ಲಾ ಹೂವು ನಿಂದೇ.. ಆದರೆ ಆ ಘಮ, ಆ ಹಾಡು..
ಗಿಡಗಂಟಿಯ ಕೊರಳೊಳಗಿಂದ
ಹಕ್ಕಿಗಳಾ ಹಾಡು, ಹೊರಟಿತು ಹಕ್ಕಿಗಳಾ ಹಾಡು..
ಮತ್ತು ನೀನು, ಇವೆಲ್ಲಾ ನಂದೇ..
ಒಪ್ಪುತ್ತೀಯಲ್ಲಾ?
ಗುರುವಾರ, ನವೆಂಬರ್ 25, 2010
ಶುಕ್ರವಾರ, ನವೆಂಬರ್ 12, 2010
ಹೊಸ ವರ್ಷಕ್ಕೆ ಎರಡು ಹೊಸ ಜೀವಗಳ ನಿರೀಕ್ಷೆ...

ಹೌದು, ಹೊಸ ವರ್ಷ ೨೦೧೧ಕ್ಕೆ ನಮ್ಮ ಮನೆಗೆ ಎರಡು ಹೊಸ ಜೀವಗಳ ಆಗಮನವಾಗುತ್ತವೆ.
ಮೊದಲಿಗೆ, ನನ್ನ ಮುದ್ದಿನ ತಂಗಿ, ಅಮ್ಮಯ್ಯನ, (ಶ್ರೀಮತಿ ಶಶಿಕಲಾರುದ್ರೇಶ್, ಮಲ್ಲಸಂದ್ರ.) ಹೊಟ್ಟೆಯಲ್ಲಿ, ಹುಟ್ಟುವ ಆ ಹೊಸ ಜೀವ ನಮಗೆಲ್ಲ ಹೊಸ ಉತ್ಸಾಹ, ಬರವಸೆ ಮೂಡಿಸಿದೆ
ಹುಟ್ಟುವ ಆ ಹೊಸ ಜೀವ, ಹೆಣ್ಣಾಗಲಿ ಎಂಬುದು ನಮ್ಮನೆಯವರ ಆಶೆ. ಗಂಡಾಗಲಿ, ಎಂಬುದು ಮಲ್ಲಸಂದ್ರದವರ ಆಶೆ. ಗಂಡಾಗಲಿ, ಹೆಣ್ಣಾಗಲಿ, ನಮ್ಮನೆಗಂತೂ ಒಂದು ಹೊಸ ಜೀವ ಆಗಮನವಾಗುತ್ತದೆ.
ಸೋಮವಾರ, ಅಕ್ಟೋಬರ್ 25, 2010
ಮಳೆ
ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.
ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.
ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ ಮುಂದಿನ ಮಳೆಯಲ್ಲಿ ಅಳಕ್ಕೆ interest ಇರಲ್ಲ.
ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.
ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !
ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – “ Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !






















