BREKING NEWS

ಶನಿವಾರ, ಏಪ್ರಿಲ್ 27, 2013

“ಅವಳ ಬಾಳ ಪುಟಗಳಿಂದ”

ಈ ಸಂಚಿಕೆಯಲ್ಲಿ ಅನೇಕ ಹಿರಿಯ-ಕಿರಿಯ ಲೇಖಕರು ನಮ್ಮ ಜೊತೆಗಿದ್ದಾರೆ. ಹಿರಿಯ ವಿಜ್ಞಾನ ಲೇಖಕರಾದ ನಾರಾಯಣ ಬಾಬಾನಗರ ಈ ಸಂಚಿಕೆಯಿಂದ “ಗೆಲುವಿನೆಡೆಗಿನ ನೋಟ” ಎಂಬ ಅಂಕಣ ಬರೆಯಲಿದ್ದಾರೆ. ಕಿರಿವಯಸ್ಸಿಗೆ ಪತ್ರಕರ್ತರಾಗಿ, ಕವಿಯಾಗಿ ಹೆಸರು ಮಾಡಿರುವ ಅರೆಯೂರು ಚಿ.ಸುರೇಶ್ “ಅವಳ ಬಾಳ ಪುಟಗಳಿಂದ” ಎಂಬ ಲೇಖನ ಸರಣಿಯನ್ನು ಬರೆಯಲಿದ್ದಾರೆ. ಹಾಸನದ ಸುಷ್ಮಾ ಸಿಂಧುರವರ ಲೇಖನವಿದೆ. ಜೊತೆಗೆ, ಬಹಳ ಮುಖ್ಯವಾಗಿ ಮೊದಲಿನಿಂದಲು ಹೊಸ ಲೇಖಕರನ್ನು ಪ್ರೋತ್ಸಾಹಿಸುತ್ತಿರುವ ನಮ್ಮ ಪತ್ರಿಕೆ, ಹಲವು ಹೊಸಬರ ಲೇಖನಗಳನ್ನು ಮುಖಪುಟದ ಲೇಖನಗಳಾಗಿ ಪ್ರಕಟಿಸಿದೆ. ಅದೇ ರೀತಿ ಈ ಬಾರಿ ರಾಘವೇಂದ್ರರವರ “ಲಿವಿಂಗ್ ಟುಗೆದರ್” ಎಂಬ ಚಿಂತನಯೋಗ್ಯ ಲೇಖನವಿದೆ. ಅವರಿಗೆ ಈ ಲೇಖನ ಬರೆಯಲು ಕನ್ನಡದ ಖ್ಯಾತ ಕಾದಂಬರಿಯಿಂದ ಪ್ರೇರಣೆ ದೊರೆತಿದೆ. ಈ ಲೇಖನ ಅವರಲ್ಲಿ ಪಡಿಮೂಡಲು ಕಾರಣ, ಓದು. ನಿಮ್ಮ ಜೀವನದ ಚೇತನವನ್ನು ಪ್ರೇರೆಪಿಸುವ ಓದು ನಿಮ್ಮದಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.