ಸಂಪಾದಕರಾದ ಅರೆಯೂರು ಚಿ.ಸುರೇಶ್ ರವರು ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಅರೆಯೂರು ಗ್ರಾಮದ ಶ್ರೀಮತಿ ಜಯಮ್ಮ, ಶ್ರೀ. ಚಿಕ್ಕಮಾದಯ್ಯನವರ ದ್ವಿತೀಯ ಪುತ್ರನಾಗಿ 1983 ರ ಆಗಸ್ಟ್ 30 ನೇ ತಾರೀಖು ಜನಿಸಿದರು ಇವರ ಮೊದಲ ಹೆಸರು ಲೋಕೇಶ್ ನಂತರ ಮನೆಯವರು ಪ್ರೀತಿಯಿಂದ ಸೂರಿ ಎಂದು ಕರೆದು, ಶಾಲೆಯಲ್ಲಿ ಎ.ಸಿ ಸುರೇಶ್ ಎಂದು ಹೇಳಿದರು, ಅರೆಯೂರು ಚಿಕ್ಕಮಾದಯ್ಯ ಸುರೇಶ್ ಅಲಿಯಾಸ್ರೆಯೂರು ಚಿ.ಸುರೇಶ್ ರವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅರೆಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರೆಯೂರು ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರಶಾಲೆಯಲ್ಲಿ ಪರೀಕ್ಷೆಶಿಕ್ಷಣವನ್ನು ಮುಗಿಸಿ ಹಾಲನೂರು ಗ್ರಾಮದ ಶ್ರೀ ಸಿದ್ಧಗಂಗಾ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಶಾಲೆಯಲ್ಲಿ ಬಿ.ಎ. ಪದವಿ ಮುಗಿಸಿ, ವಿದ್ಯೋದಯ ಕಾನೂನು ಕಾಲೇಜಿಗೆ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿ, ತಮ್ಮ ಓದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ತುಮಕೂರಿನ ಅಮರ ಸಂದೇಶ ಸಂಜೆ ಪತ್ರಿಕೆ, ತುಮಕೂರು ವಾರ್ತೆ, ನಗೆಮುಗುಳು, ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ, ಕಥೆ, ಕವಿತೆ, ಹಾಸ್ಯ ಲೇಖನ, ವ್ಯಂಗ್ಯಚಿತ್ರ, ಚುಟುಕು ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡಿರುವ ಅರೆಯೂರು ಚಿ.ಸುರೇಶ್ ರವರು, ಅರೆಯೂರು ಚಿ.ಸುರೇಶ್, ಅರೆಯೂರು ಸುರೇಶ್, ಕಾವ್ಯ ಮಧುಗಿರಿ, ಮಾಣಿಕ್ಯ ಮಡಿಕೇರಿ, ಅರೆಯೂರು ಶ್ರೀ ವೈದ್ಯಸುತ, ಅಚಿಸು, ನಾದಪ್ರಿಯ, ಭಾರತಿಪ್ರಿಯ, ಅರೆಯೂರು ಕಾವ್ಯಸುತ, ಎಂಬ ಹಲವಾರು ಕಾವ್ಯನಾಮದಿಂದ ಹಲವಾರು ಲೇಖನಗಳನ್ನು, ಕಥೆ ಕವನಗಳನ್ನು ರಚಿಸಿದ್ದಾರೆ
ಅರೆಯೂರು ಚಿ.ಸುರೇಶ್ ರವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಪ್ರಮುಖವಾದವುಗಳೆಂದರೆ ಪ್ರಜಾವಾಣಿ, ಸುಧಾ ಮಯೂರ, ತುಷಾರ, ಉದಯವಾಣಿ, ಉದಯಕಾಲ,,ಮಲ್ಲಿಗೆ ಮಾಸಪತ್ರಿಕೆ, ನವರಾಗಸಂಗಮ, ಸಖಿ, ನಿಮ್ಮೆಲ್ಲರ ಮಾನಸ, ಮಾಣಿಕ್ಯ, ಓ ಮನಸೇ, ಹಾಯ್ ಬೆಂಗಳೂರು, ಸಂಜೆವಾಣಿ, ಗೃಹಶೋಭ, ಯುಗಪುರುಷ, ನಗೆಮುಗುಳು, ಪ್ರಜಾಪ್ರಗತಿ, ಪ್ರಜಾಮನ, ತುಮಕೂರು ಮಿತ್ರ, ಗೋವ ರಾಜ್ಯದಿಂದ ಪ್ರಕಟವಾಗುತಿದ್ದ ಗೋವ ದರ್ಪಣ, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಅಂತರ್ಜಾಲ ಪತ್ರಿಕೆಗಳಾದ ಪಂಜು, ಅವಧಿ, ಸಂಪದ, ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಆನ್ ಲೈನ್ ನ್ಯೂಸ್, ಕನ್ನಡ ನ್ಯೂಸ್ ನೌ ಸೇರಿದಂತೆ ಹಲವು ತಾಣಗಳಲ್ಲಿ ಲೇಖನ, ಕಥೆ ಕವಿತೆ ಪ್ರಕಟಗೊಂಡಿವೆ
ಅರೆಯೂರು ಚಿ.ಸುರೇಶ್ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆಗಳು ಅರೆಯೂರು ಪತ್ರಿಕೆ, ಅರೆಯೂರು ನ್ಯೂಸ್, ಬಡವರ ಕೂಗು, ಸುದ್ದಿ ಸಮಾಚಾರ, ಕನ್ನಡ ಇ ನ್ಯೂಸ್, ತುಳು ನ್ಯೂಸ್ ಪ್ರಮುಖವಾದವುಗಳು
ವಾಲ್ಮೀಕಿ ಮಿತ್ರ ಪತ್ರಿಕೆಯಲ್ಲಿ ಕಾರ್ಯಕಾರಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಗುಬ್ಬಿ ತಾಲ್ಲೂಕು ವರದಿಗಾರರಾಗಿ, ಪ್ರಜಾಮನ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ತುಮಕೂರು ವಾರ್ತೆ, ಅಮರ ಸಂದೇಶ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ
ಅರೆಯೂರು ಚಿ.ಸುರೇಶ್ ರವರಿಗೆ ಕಾವ್ಯಶ್ರೀ, ಹೆಮ್ಮೆಯ ಕನ್ನಡಿಗ, ಕನ್ನಡ ಮಾಣಿಕ್ಯ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ
ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದ ಅರೆಯೂರು ಚಿ.ಸುರೇಶ್ ರವರು ದೂರದ ಕರಾವಳಿ ಭಾಗದ ತುಳು ಭಾಷೆಯ ತುಳು ನ್ಯೂಸ್ ಆನ್ಲೈನ್ ಪತ್ರಿಕೆ ಮಾಡಿ ತುಳು ನಾಡಿನ ತುಳು ಭಾಷಿಕರಿಗೆ ತುಳು ಭಾಷೆಯಲ್ಲಿ ಸುದ್ದಿ ನೀಡುತ್ತಿರುವ ಕಾರ್ಯ ಶ್ಲಾಘನೀಯ
ಅರೆಯೂರು ಚಿ.ಸುರೇಶ್ ರವರ ಪ್ರಕಟಿತ ಕೃತಿಗಳು
ಶಿರ್ಷಿಕೆ | ಪ್ರಕಾರ | ಪ್ರಕಟಿತ ವರ್ಷ
ಕಾವ್ಯಮಂಜರಿ (ಕವನ ಸಂಕಲನ) 2012
ಮಾಣಿಕ್ಯ (ಕಥಾಸಂಕಲನ) 2014
ಅನಾಮಿಕ (ಕಾದಂಬರಿ) 2016
ಕನಸು (ಕವನ ಸಂಕಲನ) 2014
ಪ್ರೇಮಾಯಣ (ಕಥಾಸಂಕಲನ) 2017
ಮಂಥನ (ಲೇಖನ ಸಂಗ್ರಹ) 2017
ಆರೋಗ್ಯವಾಗಿರೋಣ... (ಲೇಖನ ಸಂಗ್ರಹ) 2019
ಶ್ರೀ ವೈದ್ಯನಾಥೇಶ್ವರ ಸ್ವಾಮಿ ಚರಿತ್ರೆ (ಲೇಖನ ಸಂಗ್ರಹ) 2013
ನಮ್ಮೂರ ಇತಿಹಾಸ (ಲೇಖನ ಸಂಗ್ರಹ) 2013
(ಎಲ್ಲಾ ಕೃತಿಗಳ ಪ್ರಕಾಶಕರು: ಶಮಿತಾ ಪಬ್ಲಿಕೇಶನ್, ಪಡುಬಿದ್ರಿ, ಉಡುಪಿ)
![]() |
