- ಹಿಟ್ಲರ್‌ಗಾಗಿ ಸತ್ತು ಬದುಕಿದ್ದ ಮಾರ್ಗೋಟ್!
- ಹಿಟ್ಲರ್‌ಗಾಗಿ ಪ್ರತಿದಿನವೂ ಸತ್ತು ಬದುಕಿದ್ದ ಮಾರ್ಗೋಟ್..!
ಜರ್ಮನಿಯನ್ನು ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭಾರೀ ಪುಕ್ಕಲ. ಯಾರಾದರೂ ತನಗೆ ಆಹಾರದಲ್ಲಿ ವಿಷ ಸೇರಿಸಿ ಸಾಯಿಸಬಹುದೆಂಬುದು ಭೀತಿ ಆತನನ್ನು ಸದಾ ಕಾಡುತ್ತಿತ್ತು. ಹೀಗಾಗಿ ತನಗೆ ಸಿದ್ಧಪಡಿಸಿದ್ದ ಆಹಾರ ಪರೀಕ್ಷಿಸಲೆಂದೇ 15 ಮಹಿಳೆಯರ ನೇಮಿಸಿಕೊಂಡಿದ್ದ. ಅವರೆಲ್ಲಾ ಆಹಾರ ತಿಂದ ಮೇಲೂ ಬದುಕಿದ್ದಾರೆ ಎಂಬುದನ್ನು ಖಚಿತಡಿಸಿಕೊಂಡ ಬಳಿಕವಷ್ಟೇ ಆತ ತಾನು ಆಹಾರ ತಿನ್ನುತ್ತಿದ್ದ. ಹೀಗೆ ಆಕಸ್ಮಿಕವಾಗಿ ಆತನ ಕೈಗೆ ಸಿಕ್ಕು, ಆಹಾರ ಪರೀಕ್ಷೆಯ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದು ಮಾರ್ಗೋಟ್ ವೋಕ್ ಎಂಬ ಮಹಿಳೆ.
ಹಿಟ್ಲರ್ ಸಸ್ಯಾಹಾರಿ..!
ಎರಡನೇ ಮಹಾಯುದ್ಧದ ವೇಳೆ ಪತಿ ಜರ್ಮನ್ ಸೇನೆಯಲ್ಲಿ ಸೇವೆಗೆ ತೆರಳಿದ ವೇಳೆ, ಈಕೆ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಿಟ್ಲರ್‌ನ ಕೈಗೆ ಸಿಕ್ಕಿಬಿದ್ದಿದ್ದಳು. ಆತ ಮಾರ್ಗೋಟ್‌ಳನ್ನು ಆಹಾರ ಪರೀಕ್ಷೆ ಕೆಲಸಕ್ಕೆ ಸೇರಿಸಿಕೊಂಡಿದ್ದ. ಶುದ್ಧ ಸಸ್ಯಾಹಾರಿಯಾಗಿದ್ದ ಹಿಟ್ಲರ್‌ನ ಆಹಾರವನ್ನು ತಿನ್ನುವುದೇ ಮಾಗೋìಟ್ ಸೇರಿದಂತೆ 15 ಮಹಿಳೆಯರ ಏಕೈಕ ಕೆಲಸವಾಗಿತ್ತು. ಪ್ರತಿ ಬಾರಿ ಆಹಾರ ಬಾಯಿಗಿಟ್ಟಾಗಲೂ ಎಲ್ಲರೂ ಜೀವಭಯಕ್ಕೆ ಒಳಗಾಗಿರುತ್ತಿದ್ದರು. ರುಚಿಯಾದ ಆಹಾರ ಬಾಯಲ್ಲಿದ್ದರೂ, ಅದರಲ್ಲಿ ವಿಷ ಇರಬಹುದೇನೂ ಎಂಬ ಆತಂಕ ಅವರನ್ನೆಲ್ಲಾ ಕಾಡುತ್ತಿತ್ತು.
ಇಷ್ಟೆಲ್ಲಾ ಭದ್ರತೆ ಇದ್ದರೂ, 1944ರಲ್ಲಿ ಹಿಟ್ಲರ್‌ನ ಆಪ್ತ ಬಳಗದಲ್ಲಿದ್ದ ವ್ಯಕ್ತಿಯೋರ್ವನೇ ಬಾಂಬ್ ದಾಳಿ ನಡೆಸಿ ಹಿಟ್ಲರ್ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಹಿಟ್ಲರ್ ಬದುಕುಳಿದ. ಈ ಸ್ಫೋಟದ ಘಟನೆಯ ಸಮಯದಲ್ಲೇ ಆಪ್ತರ ಸಲಹೆ ಮೇರೆಗೆ ಮಾರ್ಗೋಟ್ ಹಿಟ್ಲರ್‌ನ ಆವಾಸಸ್ಥಾನದಿಂದ ಪರಾರಿಯಾಗಿ ಬರ್ಲಿನ್ ಸೇರಿಕೊಂಡಿದ್ದಳು. ಆದರೆ ಉಳಿದ 14 ಜನ ಸೇವಕಿಯರು ಹಿಟ್ಲರ್ ಬಳಿಯೇ ಉಳಿದುಕೊಂಡಿದ್ದರು.
ಮುಂದೆ ಕೆಲವೇ ದಿನಗಳಲ್ಲಿ ಸೋವಿಯತ್ ಒಕ್ಕೂಟದ ಪಡೆಗಳು ಜರ್ಮನ್ ಮೇಲೆ ದಾಳಿ ನಡೆಸಿ ದೇಶವನ್ನು ಕೈವಶ ಮಾಡಿಕೊಂಡವು. ಸೋವಿಯತ್ ಪಡೆಗಳು ಹಿಟ್ಲರ್‌ನ ಎಲ್ಲಾ 14 ಆಹಾರ ಪರೀಕ್ಷಕಿಯರನ್ನು ಗುಂಡಿಟ್ಟು ಹತ್ಯೆ ಮಾಡಿದವು. ಇತ್ತ ಹಿಟ್ಲರ್‌ನಿಂದ ಪಾರಾಗಿದ್ದ ಮಾರ್ಗೋಟ್ ರಷ್ಯಾ ಸೈನಿಕರ ಕೈಯಲ್ಲಿ ಸತತ 14 ದಿನ ಅತ್ಯಾಚಾರಕ್ಕೆ ತುತ್ತಾದಳು.
ಮುಂದೆ ಯುದ್ಧ ಮುಗಿದ ಮೇಲೆ ಆಕೆ ಹೊಸ ಜೀವನ ಕಂಡುಕೊಂಡಿದ್ದಳು. ಆದರೆ ತಾನು ಹಿಟ್ಲರ್‌ನ ಆಹಾರ ಪರೀಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ವಿಷಯವನ್ನೂ ಮಾರ್ಗೋಟ್ ಯಾರಿಗೂ ತಿಳಿಸಿರಲಿಲ್ಲ. ತಿಳಿಸಿದರೆ ಯಾರಾದರೂ ಹತ್ಯೆ ಮಾಡುವ ಭಯ ಆಕೆಯನ್ನು ಕಾಡುತ್ತಿತ್ತು. ಇದೀಗ ಜೀವನದ ಕಡೆಯ ಕ್ಷಣಗಳನ್ನು ಎಣಿಸುತ್ತಿರುವ ಮಾರ್ಗೋಟ್, ತನ್ನ ಅನುಭವಗಳನ್ನೆಲ್ಲಾ ಬಯಲು ಮಾಡಿದ್ದಾಳೆ. ಅದರಲ್ಲಿ ಆಕೆ ತನ್ನ ಈ ಕಥೆ ಹೇಳಿಕೊಂಡಿದ್ದಾಳೆ.
BREKING NEWS