ಕವಿತೆ ಹುಟ್ಟಿತೆ ?

ಕವಿತೆ ಹುಟ್ಟಿತೆಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?

ನಿಸರ್ಗದ ಅಂತರಾಳದಲ್ಲಿ

ಅನುಭವದ ಬುತ್ತಿಯಲ್ಲಿ
ಅರಳಲಾರದ ಕವಿತೆ
ಗೀಜಿಗುಡುವ ಈ ಕಾಂಕ್ರಿಟ್ ಕಾಡಿನಲ್ಲಿ
ದುಗುಡದ ತಳಮಳದಲ್ಲಿ ಹುಟ್ಟಿತೆ ಕವಿತೆ ?
ಬೆಟ್ಟದ ಕಲ್ಲುಬಂಡೆ ಶಿಲೆಯಾಗಲು
ಅದೆಷ್ಟು ಉಳಿಗಳ ಹೊಡೆತ ?
ಶಿಲ್ಪಿಯ ಭಯಂಕರ ಸಹನೆ ?
ಮಂದಹಾಸದಲ್ಲಿ ನಗದ ಶಿಲೆ
ತಳಮಳದಲ್ಲಿ ಅರಳುವುದೇ ಕಲೆ ?
ಹೀಗೆ .... ಧೀಡಿರನೆ
ಕವಿತೆ ಹುಟ್ಟುವಂತಿದ್ದರೆ ...
ಇಷ್ಟೋತ್ತಿಗೆ ನಾನು ಪ್ರಕಟಿಸಿ ಬಿಟ್ಟಿರುತ್ತಿದ್ದೆ
ಕವನ ಸಂಕಲನಗಳ
ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ?
ಗರ್ಭಕಟ್ಟಿ ನವಮಾಸಗಳ ಕಾಲ
ತಾಯ ಗರ್ಭದಲ್ಲಿ ಬೆಳೆದ ಮಗುವಿನ
ಜನನವೆ ಎಷ್ಟೊಂದು ಕಷ್ಟಕರ
ಅಂತಹುದರಲ್ಲಿ ... ಸ್ಪರ್ಧೆಗಾಗಿ
ಗರ್ಭವನ್ನೇ ಕಟ್ಟದೆ
ಧಿಡೀರನೆ ಕವಿತೆ
ಹುಟ್ಟುವುದಾದರೂ ಹೇಗೆ ?
ಹೇಳಿ... ಕವಿತೆ ಹುಟ್ಟಿತೆ ?