BREKING NEWS

ಗುರುವಾರ, ನವೆಂಬರ್ 3, 2011

ಯಾಕೆ ಕಾಡುತಿದೆ ಸುಮ್ಮನೆ ನನ್ನನು ಈ …ಹಾಡು?


ಎಲ್ಲಾ ಹಾಡುಗಳನ್ನು ಕೇಳಿದಾಗ ಹೀಗಾಗುವುದಿಲ್ಲ. ಕೆಲವೇ ಕೆಲವು ನಿರ್ದಿಷ್ಟ ಹಾಡುಗಳಿಗೆ ಮಾತ್ರ ಒಂದು ವಿಲಕ್ಷಣ ಶಕ್ತಿಯಿರುತ್ತದೆ. ನಮ್ಮನ್ನು ಪದೇ ಪದೇ ಕಾಡಿಸುವ ತಾಕತ್ತಿರುತ್ತದೆ. ಭಾವನೆಗಳನ್ನು ಬಡಿದೆಬ್ಬಿಸುತ್ತವೆ. ಈ ಜಗತ್ತೆಲ್ಲಾ ಸುಳ್ಳುಬೇರೇನೂ ಬೇಕಿಲ್ಲ…ಈ ಹಾಡೊಂದೆ ಈ ಕ್ಷಣದ ಸತ್ಯ…ಇರಲಿ ಇದು ನಿತ್ಯ ಅನ್ನಿಸಿಬಿಡುತ್ತದೆ. ಜೋಗುಳ ಹಾಡಿತನ್ನ ಮಡಿಲಲ್ಲಿ ಮಲಗಿಸಿಕೊಂಡು ಚುಕ್ಕು ತಟ್ಟಿ ತೂಗುತ್ತದೆ. ಮತ್ತೆ ಮತ್ತೆ ಕೇಳುವಂತೆ ಪ್ರೇರೇಪಿಸುತ್ತದೆ. ಸಂಗೀತದ ಸುಧೆಯಲಿ  ಮಿಂದ ಮನಸ್ಸು ತಾನೇ ಹಾಡಾಗಿ ಉಲಿಯುತ್ತದೆ. ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂಎಂತಹಾ ಪರಿಸ್ಥಿತಿಯಲ್ಲಿದ್ದರೂ ನಿಮ್ಮನ್ನು ಕೈಬೀಸಿ ಕರೆದು ತೆಕ್ಕೆಯೊಳಗೆಳೆಯುತ್ತದೆ. ಹಾಡಿನ ಮೋಡಿಗೆ ಸಿಲುಕಿ ಬಂಧಿಯಾದರೂ ವಿಮುಕ್ತ…ಹಾಡಿನ ಅಲೆಗಳಲಿ ತೇಲಿ ಉನ್ಮತ್ತ. ಎಲ್ಲ ಬೇಸರದುಗುಡದುಮ್ಮಾನಗಳ ಮರೆಸಿ ಸಂಗಾತಿಯಂತೆ ಕೈ ಹಿಡಿಯುತ್ತದೆ. ನಿಮಗೂ ಇಂತಹ ಅನುಭವ ಮೂಡಿಸಿದ ಹಾಡುಗಳ್ಯಾವುದಾದರೂ ಇವೆಯಾ?

ಬದುಕಿನ ವಿವಿಧ ಹಂತಗಳಲ್ಲಿ ನೂರಾರು-ಸಾವಿರಾರು ಹಾಡುಗಳನ್ನು ಕೇಳಿರುತ್ತೇವೆ. ಭಕ್ತಿಗೀತೆಭಾವಗೀತೆಜಾನಪದ ಗೀತೆಚಿತ್ರಗೀತೆರಾಪ್-ಪಾಪ್‌ನಂತಹ ವಿಚಿತ್ರಗೀತೆಗಝಲ್‌ಗಳು…ಹೀಗೆ ಅಸಂಖ್ಯಾತ ಹಾಡುಗಳು ನಮ್ಮ ಕರ್ಣಪಟಲಕ್ಕೆ ತಾಕುತ್ತವೆ. ಈ ಸಾವಿರಾರು ಹಾಡುಗಳಲ್ಲಿ ಕೆಲವಕ್ಕೆ ಮಾತ್ರ ಮನಸ್ಸನ್ನು ಮುಟ್ಟುವ ತಟ್ಟುವ ತಾಕತ್ತಿರುತ್ತದೆ. ಹಾಗೆ ನಮ್ಮನ್ನು ತಲುಪಿದ ಹಾಡುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಆಪ್ತವಾಗಿ ಕೈ ಹಿಡಿಯುತ್ತವೆ…ನಮ್ಮದೇ ಇದು ಎಂದೆನಿಸುತ್ತವೆ. ಸಾಹಿತ್ಯ ಬರೆದವರುಸಂಗೀತ ನೀಡಿದವರುಅದಕ್ಕೆ ಭಾವ ತುಂಬಿ ಹಾಡಿದವರು ನಮಗಾಗಿಯೇ ರಚಿಸಿದ್ದಾರೋ ಅನ್ನಿಸುವಷ್ಟು ನಮ್ಮ ಬದುಕಿನಲ್ಲಿ ಮಹತ್ವ ಪಡೆಯುವ ಆ ಹಾಡುಗಳು..ಆಹಾ…..ಅಸೀಮ..ಅನುಪಮ..ಅದ್ಭುತ. ನಿಜಕ್ಕೂ ಬಣ್ಣನೆಗೆ ನಿಲುಕದ ಸಂಗೀತ. ಹಾಡು ಇಷ್ಟವಾಗುವುದೆಂದರೆ ಏನುಅದರ ಸುಮಧುರ ಸಂಗೀತವೇಹಾಡಿದ ಗಾಯಕರ ಸ್ವರ ಮಾಧುರ್ಯವೇ,ಹಾಡಿನಲ್ಲಡಗಿರುವ ಭಾವದ ಸೆಳಕೇಹಾಡಿನ ಪದಗಳ ಚಮತ್ಕಾರವೇ…ಅಥವಾ ಇವೆಲ್ಲ ಮೆಳೈಸಿದ ಒಟ್ಟು ಮೊತ್ತವೇ..ಈ ಪ್ರಶ್ನೆಗೂ ನಿಲುಕದ ಇನ್ಯಾವ ವಿಶೇಷವಿದೆ ಹಾಡೆಂಬ ಗಾರುಡಿಯಲ್ಲಿಉಳಿದ ಸಾವಿರಾರು ಹಾಡುಗಳಿಗಿರದ ಆ ಮಾಂತ್ರಿಕ ಶಕ್ತಿ ಒಂದು ನಿರ್ದಿಷ್ಟ ಹಾಡಿಗೇ ಒಲಿದುದಾದರೂ ಹೇಗೆ?

ಲಕ್ಷ್ಮೀನಾರಯಣ ಭಟ್ಟರ ಕೆಲವು ಭಾವಗೀತೆಗಳುಗುಲಾಮ್ ಅಲಿ ಮತ್ತು ಅಬೀದ ಪರ್ವೀನ್‌ಳ ಕೆಲವು ಗಝಲುಗಳುಕಿಶೋರ್ ಕುಮಾರನ ಒಂದೆರಡು ಅದ್ಭುತ ಹಾಡುಗಳುಕುಮಾರ್ ಸಾನು ಮೆಲೋಡಿಗಳುಸೋನು ನಿಗಂ ಧ್ವನಿಯಲ್ಲಿ ಮೂಡಿರುವ ಒಂದೆರಡು ಭಾವ ತೀವ್ರತೆಯ ಪದ್ಯ…ನನಗೆ ಇಂತಹಾ ಅನುಭೂತಿ ಕೊಟ್ಟಿವೆ. ಮನಸ್ಸಿಗೆ ಬೇಸರವಾದಾಗಲೆಲ್ಲಾ ಈ ಹಾಡುಗಳನ್ನು ಕೇಳಿ ಮನಸ್ಸು ಲಹರಿಗೆ ಬರುವಂತೆ ಮಾಡಬಲ್ಲ ಈ ಹಾಡುಗಳು…ಬದುಕಿನ ಸ್ವರಗಳೇನೋ ಎನ್ನುವಷ್ಟು ಆಪ್ಯಾಯಮಾನ. ಮನಸಿನ ಸುಪ್ತಸ್ವರಗಳಿಗೆ ದನಿಯಾಗುವ ಆಪ್ತಸ್ವರಗಳು. ಅಂತದ್ದೇನಿದೆ ಈ ಹಾಡುಗಳಲ್ಲಿ ಅಂತ ಎಷ್ಟೋ ಬಾರಿ ಯೋಚಿಸಿದರೂ ಉತ್ತರ ಇಂದಿಗೂ ಹೊಳೆದಿಲ್ಲ…ಬಹುಶಃ ಎಲ್ಲವೂ ಇರಬೇಕು.

ಹಾಗಂತ ಎಲ್ಲರ ಇಷ್ಟದ ಹಾಡುಗಳೂ ಒಂದೇ ಆಗಿರಬೇಕು..ಅಥವಾ ಒಂದೇ ರೀತಿಯದಾಗಿರಬೇಕು ಅಂತೇನಿಲ್ಲ. ನಮ್ಮ ನಮ್ಮ ಮನಸಿನ ಭಾವರುಚಿ-ಅಭಿರುಚಿಇಷ್ಟಾನಿಷ್ಟಆಸಕ್ತಿಸ್ವಭಾವಹಿನ್ನೆಲೆಗಳಿಗೆ ಅನುರೂಪವಾಗಿ ಬೇರೆ ಬೇರೆ ವ್ಯಕ್ತಿಗಳಿಗೆ-ವ್ಯಕ್ತಿತ್ವದವರಿಗೆ ಬೇರೆಯದೇ ಹಾಡುಗಳು ರುಚಿಸಬಹುದು. ಆ ಹಾಡಿನೊಂದಿಗೆ ಉದ್ದೀಪನಗೊಳ್ಳುವ ಸುಪ್ತಮನಸ್ಸಿನ ಯಾವುದೋ ಭಾವಕ್ಕೆನೆನಪಿಗೆಆ ಹಾಡು ಹೊರಹೊಮ್ಮಿಸುವ ಅಂತರ್ಯದ ನುಡಿಗಳಿಗೆ ತಕ್ಕಂತೆ ಹಾಡು ಮನಸ್ಸನ್ನು ಸೆಳೆಯುತ್ತದೆ. ಹಾಡಿನ ಜನಪ್ರೀಯತೆಗೂ ಅದು ಆಪ್ತವಾಗುವ ಪರಿಗೂ ಸಂಬಂಧವಿರಬೇಕೆಂದೇನಿಲ್ಲ. ಗುಂಪಿನಲ್ಲಿದ್ದಾಗ ಕೇಳಿ ಖುಶಿಪಡುವ ಹಾಡು ಎಷ್ಟೋ ಬಾರಿ ಏಕಾಂತದಲ್ಲಿ ಕಿರಿಕಿರಿ ಹುಟ್ಟಿಸುವುದೂ ಇದೆ. ಆದರೆ ನಮ್ಮ ಚಿತ್ತಭಿತ್ತಿಯೊಳಗೆ ಅಚ್ಚೊತ್ತಿ ಕುಳಿತ ಹಾಡುಗಳಿಗೆ ಕರೆದಾಗಲೆಲ್ಲಾ ಕೈಹಿಡಿದು ಸಂತೈಸುವ ಅನನ್ಯ ಗುಣವಿರುತ್ತದೆ. ಯಾವ ಹೊತ್ತಿನಲ್ಲಿ ಕೇಳಿದರೂ..ಮನಸ್ಸು ಹಾಡಾಗುತ್ತದೆ…ಭಾವ ಲಹರಿ ಹರಿಯುತ್ತದೆ.

ವೋಡಾಫೊನ್ ಜಾಹೀರಾತಿನಲ್ಲಿ ಬರುವ ಕಭೀ ಕಭೀ..ಮೆರೆ ದಿಲ್ ಮೆ..ಖಯಾಲ್ ಆತಾ ಹೈ ಹಾಡು ವ್ಯಕ್ತಿಯೊಬ್ಬನ ಬದುಕಿನುದ್ದಕ್ಕೂ ಪಸರಿಸುವ ಪರಿಯನ್ನು ಕಂಡಾಗ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹೇಳಲು…ಇಷ್ಟೆಲ್ಲಾ ಬರೆಯಬೇಕಾಯ್ತು.ಆ ಜಾಹಿರಾತಿನ ಕಾನ್ಸೆಪ್ಟ್ಉದ್ಧೇಶ ಬೇರೆಯದೇ ಆದರೂ….ಒಂದು ಹಾಡು ಬದುಕಿನಲ್ಲಿ ಹೇಗೆಲ್ಲಾ ಹಾಸುಹೊಕ್ಕಾಗಬಹುದು ಅಂತ ಯೋಚಿಸಿದಾಗ..ಹೌದಲ್ಲ..ಎಷ್ಟು ಸತ್ಯ ಅನ್ನಿಸಿತು. ಈ ಬರಹ ಓದಿದ ಮೇಲೆನಿಮ್ಮನ್ನು ಕಾಡಿದ ಇಂತಹಾ ಹಾಡುಗಳ ಸ್ಮೃತಿ ನಿಮ್ಮನ್ನಾವರಿಸಲಿ….ತನ್ಮೂಲಕ ನಿಮ್ಮ ಬದುಕು ಹಾಡಾಗಲಿ ಎಂಬ ಹಾರೈಕೆಗಳೊಂದಿಗೆ

                                                                                          -ಅರೆಯೂರು ಚಿ.ಸುರೇಶ್